Monday, October 5, 2015

ಆ ದಿನದ ಮುಸ್ಸಂಜೆ!!

ಬಿಟ್ಟಿರಲಾಗುತ್ತಿಲ್ಲ ನನಗೆ ನಿನ್ನ ಒಂದು ಕ್ಷಣ!
ಬಳಸಿ ಬಳಿ ಇರಬೇಕೆಂಬ ಆಸೆ ಮನದೊಳು ಅನುದಿನ!!
ಮನಸ್ಸು ಹಿಡಿತ ತಪ್ಪಿ ಮಾಡಿದೆ ಮನವ ತಲ್ಲಣ!
ಹೃದಯ ಬಡಿತ ಹೆಚ್ಚುತಿದೆ ಯಾಕೀ ನೋವು ತನುಮನ!
ಒಂದು ಕ್ಷಣ ನೀ ಕಣ್ಮುಂದೆ ಇಲ್ಲದಿರದ ಜೀವನ
ಅಕ್ಷರಶಃ ಎಂದೆಂದಿಗೂ ಇದು ಬರಿದಾದ ಕಾನನ!!!
ನಿನ್ನ ಬಿಸಿ ಅಪ್ಪುಗೆಯ ಸ್ಪರ್ಶ
ಮೈನವಿರೇಳಿಸುವ ಮರೆಯಲಾಗದ ಹರ್ಷ!!!
ತುಟಿಯ ಮೆತ್ತನೆಯ ಒತ್ತಿಗೆ  ಪುಟಿದೇಳುತಿದೆ ಮೈಮನ!!
ನಿನ್ನ ಬರದ ಸೆಳೆತಕೆ ಕಂಪಿಸುತಲಿದೆ ತನನ!!!
ನಿನ್ನ ಆ ಕಣ್ಕುಕ್ಕುವ ಕಣ್ಣೋಟ
ಬಲವಿಲ್ಲ ನನ್ನ ನಯನಗಳಿಗೆ ಎದುರಿಸಲು ತನ್ನತ್ತ!!!
ನಿನ್ನ ಆ ಬಿಸಿಯುಸಿರಿನ ಬೆಚ್ಚನೆಯ ಆಲಿಂಗನಕೆ
ಕರಗಿ ನೀರಾಗಿದೆ ಈ ಕಲ್ಲುಶಿಲೆ!
ಬಡಿದೆಬ್ಬಿಸಿದೆ ನನ್ನ ಮನದ ಶಾಂತ ಕಡಲ ಅಲೆ!!!
ಬಳಸಿ ನಿನ್ನ ಅಪ್ಪಿ ಮುದ್ದಾಡುವಾಸೆ ಈ ಕೈಗಳಿಗೆ!!
ಕಡಲ ಸೇರಲು ಕಾಯುವಾಸೆ ಈ ಅಕ್ಷಿಗಳಿಗೆ!!
ಹಾಲ್ಗಡಲ ಮತ್ತಲ್ಲಿ ಮೀಯುವಾಸೆ ಈ ಜೀವಕೆ!
ಹಾತೊರೆಯುತಿದೆ ಮುಗಿಲು ಭುವಿಯ ಭೇಟಿಗೆ!!!!
ನಿನ್ನ ಪ್ರೀತಿಯ ಕಡಲಲಿ ಮುಳುಗಿದವಳು
ಇಂತೀ ನಿನ್ನ ಪ್ರೀತಿಯ
ಅಶು!!!!!!!!!!!!!!!!!