Thursday, December 10, 2015

On demand for LATHA


ಮಾತಿನ ಮಿಂಚುಳ್ಳಿ ,ಮನವೆಂಬ ಈ ಬಳ್ಳಿ
ಹೇಳ ತೀರದ ಆ ಕಡಲ ಆರ್ಭಟ
ಬರೆಯಲು ಸಿಗದ ಸೇರಿ ಆಡಿದ ಆಟ!!
ಲತೆಯ ಆ ಕಂಪಿಗೆ,ಸವಾಲೆನಿಸುವ ಮಾತಿಗೆ
ಸಿಗುತ್ತಿಲ್ಲ ಪದಗಳು ನನಗೆ ,ಬರೆಯಲು ಈ ಲತೆಯ ಬಗ್ಗೆ!!
ಎಲ್ಲರೂ ಸೇರಿದಾಗ ಹೂದೋಟದ ನಾಯಕಿ
ಮಾತಿಗಿಳಿದರೆ ಪೋಣಿಸದ ಹಾಡಿನ ಗಾಯಕಿ!!
ತನಗರಿವಿಲ್ಲದೆ ಎಲ್ಲರ ನಗಿಸುವ ಆ ಗುಣ
ಗಾಂಭೀರ್ಯದಲ್ಲೂ ನಗುತರಿಸುವ ಕಾಜಾಣ!!
ಮನದಾಳದ ಅಡಗಿರುವ ಸತ್ಯ,ಹೊರಗೆಳೆಯಲು ಆಶಿಸದ ಮಿಥ್ಯ!!
ನಗುತಿರು ನಗಿಸುತಿರು ಎಂದೆಂದಿಗೂ ಹೀಗೆ
ಸುಖ ಸಂತೋಷಗಳ ಸರಿಗಮಗಳ ಹಾಗೆ!!!
ದೂರದ ಬೆಟ್ಟದ ಹೂವು ನೀನು
ಎಲೆ ಮರೆಯ ಕಾಯಿ ನೀನು!
ಕಾಣದ ಕೈಯ ಬೆಂಬಲ ನಿನ್ನದು
ಅರುಹಿಸಲಾಗದ ಜೀವಂತ ನಿದರ್ಶನ ಎಂದಿಗೂ ಕಾಣದು!!
ಕಲ್ಪನೆಗೂ ನಿಲುಕದ ನಿನ್ನ ನೋವು
ಕಾಡದಿರಲಿ ಎಂದಿಗೂ ನಿನ್ನ ಬಾಳಿಗೆ ಆ ಕಾವು!!
ನಗುತಿರು ಮಿನುಗುತಿರು ಆ ಬಾನಚುಕ್ಕಿಯಂತೆ
ಆಕಾಶಗಂಗೆಯ ಆ ಲತೆಗೆ ಮರುಳಾದ ಸೂರ್ಯನಂತೆ!!!
ಎಂದಿಗೂ ,ಮನಸ್ಸಿಂದ ಮನಸ್ಸಿಗಾಗಿ
ಇಂತೀ ನಿನ್ನ ಪ್ರೀತಿಯ
ಅಶು!!!!!!!!!!!!!!!!!!!

ON DEMAND FOR RESHMA

ಕಂಡಾಗ ನಿನ್ನ ಮೊದಲ ಸಲ
ಹೊಸದೆನಿಸಿದರೂ ಮಾತು ಬಲು ಅಪರೂಪ!
ಇದ್ದ ಹೂದೋಟದ ಮುಗ್ಧ ಗುಲಾಬಿ
ಆ ನಿನ್ನ ನಿಶ್ಕಲ್ಮಶ ನಗು, ಮಾತು
ಎಲ್ಲ ಎಲ್ಲವೂ ಮಾತಿಗೆ ನಿಲುಕದ್ದು!!
ಇಟ್ಟ ಹೆಸರಿನ ಜೀವಂತ ಕನ್ನಡಿ ನೀನು ರೇಷ್ಮಾ
ರೇಷ್ಮೆಗೂ ಸರಿಸಾಟಿಯಲ್ಲದ ಬೆಲೆ ಬಾಳುವ ಕುಸುಮ!!
ದಿನ ಕಳೆದಂತೆ ಹತ್ತಿರವಾಗಿದ್ದೆ ನೀನು
ಎಲ್ಲಾ ಮನ ಬಿಚ್ಚಿ ಮಾತಾಡುವಷ್ಟು
ಮರೆಮಾಚಲು ಹಿಂದೇಟು ಹಾಕುವಷ್ಟು!!
ಎಲ್ಲರ ಅಚ್ಚುಮೆಚ್ಚು ನೀನು!
ಕರೆದೊಯ್ಯಿತು ಕವಿತೆ ತುಂಬಿ ನನ್ನ ತನು!!
ನಿನ್ನ ಮುಗ್ಧ ನಗು, ಆ ಅಪರಂಜಿ ಮನಸು
ಆ ಅಕ್ಕರೆಯ ಸಕ್ಕರೆಯ ನುಡಿ
ಅದೇ ನಿನ್ನ ಬದುಕಿನ ಮುನ್ನುಡಿ!
ಇರುವಾಗ ಏಕೆ ಭಯ ಮುಖವೆಂಬ ಮನದ ಕನ್ನಡಿ!!!
ಕಂಡಾಗ ನೆನಪಾಗುವ ಪುಣ್ಯಕೋಟಿ ನೀನು!
ನಗುತಿರು ನೀನು ಸದಾ ಇನ್ನೂನು!!!
ಯಾಕೋ ಏನೋ ಅಕ್ಷರಗಳು ಸಂಕೋಚಪಡುತಿರಲು
ಮುಂದೆ ಬರೆಯಲು ನನ್ನ ಮನ ಪರಿತಪಿಸುತಿರಲು!!!
ಹೇಳ ಬಯಸಿದ್ದು ಬರೆಯಯಲಿಚ್ಚಿಸಿದ್ದು
ಎಲ್ಲವೂ ನನ್ನ ಕೈಗಳಿಗೆ ನಿಲುಕದ್ದು!!!
ಹಾರೈಸುವುದೊಂದೆ ಈ ಮನವು
ನೀನೊಂದು ನಗುವ ಪುಟ್ಟ ಕನಸಿನ ಹೂವು!
ಬಾಡದಿರಲಿ ,ಕಾಡದಿರಲಿ ನಿನಗಾವುದೇ ನೋವು!!!
ಮರೆಯದಿರು ನೀ ನಗುವ ರೀತಿ
ಚಿರಾಯುವಾಗಲಿ ಎಂದಿಗೂ
ನಾ ನಿನ್ನ ಸ್ನೇಹಲೋಕದ ಅತಿಥಿ!!!!
ಎಂದಿಗೂ ನಿನ್ನವಳು,
ಇಂತೀ ನಿನ್ನ ಪ್ರೀತಿಯ
ಅಶು!!!!!!!!!!!!!!!!!!!