Friday, January 29, 2016

ಮತ್ತೆ ಮಾಮರ ಚಿಗುರಿದಾಗ:

:
ವಸಂತಗಳೇ ನನ್ನ ಮೆರೆತವು
ಕೋಗಿಲೆಗಳು ನನ್ನನ್ನೆ ದೂರಿದವು!
ಮಾಮರಗಳು ನನ್ನ ಹೀಯಾಳಿಸಿದವು!!
ಆ ಸೂರ್ಯನು ಗ್ರಹಣಕ್ಕೆ ತಲೆಬಾಗಿ
ಬೆಳದಿಂಗಳ ನನ್ನಿಂದ ಮರೆಮಾಚಿದನು!
ಧೀರ್ಘವಾದ ನಿಟ್ಟುಸಿರು ಬಿಟ್ಟ ನಾನು ಮೌನಿಯಾದೆ!
ನಿರಾಶವಾದಿಯಾಗಿ ಸುಮ್ಮನಾದೆ!!
ಕಡಲ ತೀರದ ನೀಲಾಕಾಶವು ತುಂಬಲು ಚೈತನ್ಯ
ಮುಳುಗುವ ಸೂರ್ಯನಿಗಿಲ್ಲದಾದ ವೈಫಲ್ಯ!!!!
ಜೊತೆಗಿದ್ದ ಕೂಟವು ನನ್ನ ಒಬ್ಬಂಟಿಯಾಗಿಸಿದ ದಿನ
ಎಲ್ಲ ನನ್ನ ಮರೆತು ಬದಿಗಿರಿಸಿ ನಕ್ಕ ಆ ಕ್ಷಣ
ಜೊತೆಗಾಗಿ ನಾ ಅರಸಿ ನಡೆದಾಗ
ನೆಲೆ ಇರದ ದೋಣಿಯನು ದಡಸೇರಿಸಿದಾಗ
ಬಾಳಲ್ಲಿ ಏಕೋ ಸೋತೆನೆಂಬ ಭಾವ
ಯಶಸ್ಸು ಮರೀಚಿಕೆಯಾದ ಅನುಭವ
ಹಾಗಾದರೆ ನಾ ಎಡವಿದ್ದೆಲ್ಲಿ ಎಂಬ ಸಂಶಯ
ಸರಿಪಡಿಸಬಹುದೇ ಎಂಬ ಸದಾಶಯ!!
ಅವಕಾಶವಾದಿ ಅಲ್ಲ ನಾನು
ಬರಿ ಆಸರೆಗಾಗಿ ಆಗ್ರಹಿಸಿದ ಆಶಾವಾದಿ!!!
ಅಂತೆ ಕಂತೆಗಳ ಸಂತೆಯಲಿ
ಆತಂಕಗಳ ಜಂಜಾಟದಲಿ
ಒಂಟಿ ಕಾಲಿನ ಸಲಗದಂತೆ,
ಜಂಟಿ ಜೀವದ ಸೆಣಸಾಟವಂತೆ!!
ಬಾಳ ಕುರುಕ್ಷೇತ್ರದ ಯುದ್ಧದಲಿ
ಬಯಸಿದ್ದು ಬರಿ ಪ್ರೀತಿಯೆಂಬ ಅಂಬಲಿ!!!
ಬರಬಹುದು ದಿನ ನನಗೊಂದೆಂಬ ನಿರೀಕ್ಷೆಯಲಿ
ಕಾಯುತ ರಾಮನ ಶಬರಿಯಂತೆ ಕಾನನದಲಿ!!!

ಇಂತೀ ನಿನ್ನ ಪ್ರೀತಿಯ
ಅಶು!!!!!