ದಿನಗಳುರುಳಿದ್ದೇ ಅರಿಯಲಿಲ್ಲ
ಆಗಲೇ ವರುಷ ಒಂದಾಯಿತು ನಮ್ಮ ಪಾಣಿಗ್ರಹಣಕ್ಕೆ!
ಹೊಸ ಬಾಗಿಲ ಹೊಸ್ತಿಲಲಿ ನಿಂತ ಅನುಭವ ಮನಕೆ!
ನಿನ್ನ ಅಪ್ಪುಗೆಯ ಬಿಸಿ ಇನ್ನೂ ಹೊಸದರಂತಿದೆ ನನಗೆ !
ಕಳೆದ ಮೊದಲ ವರುಷ ಅರೆಕ್ಷಣದಂತಿದೆ
ನವ ಮದುಮಕ್ಕಳ ಛಾಯೆ ಹಸಿರಾಗಿದೆ!
ವರುಷಗಳೆಷ್ಟೇ ಕಳೆದರೂ ಇರಲಿ ಈ ಹೊಸತನ!
ವಸಂತಮಾಸದಲಿ ಚಿಗುರೊಡೆಯುವ ಮಾಮರದಂತೆ!!
ಇಂಪಾಗಿರಲು ಬಯಸಿದೆ ಈ ತನು ಮನ!
ಮಾಮರದಲಿ ಕುಳಿತು ಹಾಡುವ ಕೋಗಿಲೆಯಂತೆ!!!
ಬದುಕಿನ ಈ ಜಟಕಾ ಬಂಡಿಯಲಿ
ಜೀವನದ ಜೋಡಿ ಚಕ್ರಗಳು ನಾವು!
ಜೊತೆಯಾಗಿ ನಡೆಯೋಣ ಹಿಮ್ಮೆಟ್ಟುತ ನೋವು!!
ಮುದ್ದಾದಿದೆ ನೀನು ಕಂದನಂತೆ!
ಆರೈಸಿದೆ ನೀನು ತಾಯಿಯಂತೆ !
ಈ ನಿನ್ನ ಮಮತೆಗೆ ಮರುಳಾದೆ ನಾ
ಮರವನು ಬಳಸಿ ಬಿಗಿದಪ್ಪಿದ ಬಳ್ಳಿಯಂತೆ!!!!
ಬೇಡುವುದೊಂದೇ ಭಗವಂತನಲಿ!
ಚಿರಾಯುವಾಗಲಿ ನಮ್ಮ ಸಂಬಂಧ
ಕೊನೆಯುಸಿರಿರುವರೆಗೆ!!!
ಸುಭದ್ರವಾಗಲಿ ಈ ಅನುಬಂಧ!
ಪರಶುರಾಮ ಸೃಷ್ಟಿ ಅಳಿಯುವವರೆಗೆ!!
ಇಂತಿ ನಿನ್ನ ಪ್ರೀತಿಯ
ಅಶು!!!!
ಆಗಲೇ ವರುಷ ಒಂದಾಯಿತು ನಮ್ಮ ಪಾಣಿಗ್ರಹಣಕ್ಕೆ!
ಹೊಸ ಬಾಗಿಲ ಹೊಸ್ತಿಲಲಿ ನಿಂತ ಅನುಭವ ಮನಕೆ!
ನಿನ್ನ ಅಪ್ಪುಗೆಯ ಬಿಸಿ ಇನ್ನೂ ಹೊಸದರಂತಿದೆ ನನಗೆ !
ಕಳೆದ ಮೊದಲ ವರುಷ ಅರೆಕ್ಷಣದಂತಿದೆ
ನವ ಮದುಮಕ್ಕಳ ಛಾಯೆ ಹಸಿರಾಗಿದೆ!
ವರುಷಗಳೆಷ್ಟೇ ಕಳೆದರೂ ಇರಲಿ ಈ ಹೊಸತನ!
ವಸಂತಮಾಸದಲಿ ಚಿಗುರೊಡೆಯುವ ಮಾಮರದಂತೆ!!
ಇಂಪಾಗಿರಲು ಬಯಸಿದೆ ಈ ತನು ಮನ!
ಮಾಮರದಲಿ ಕುಳಿತು ಹಾಡುವ ಕೋಗಿಲೆಯಂತೆ!!!
ಬದುಕಿನ ಈ ಜಟಕಾ ಬಂಡಿಯಲಿ
ಜೀವನದ ಜೋಡಿ ಚಕ್ರಗಳು ನಾವು!
ಜೊತೆಯಾಗಿ ನಡೆಯೋಣ ಹಿಮ್ಮೆಟ್ಟುತ ನೋವು!!
ಮುದ್ದಾದಿದೆ ನೀನು ಕಂದನಂತೆ!
ಆರೈಸಿದೆ ನೀನು ತಾಯಿಯಂತೆ !
ಈ ನಿನ್ನ ಮಮತೆಗೆ ಮರುಳಾದೆ ನಾ
ಮರವನು ಬಳಸಿ ಬಿಗಿದಪ್ಪಿದ ಬಳ್ಳಿಯಂತೆ!!!!
ಬೇಡುವುದೊಂದೇ ಭಗವಂತನಲಿ!
ಚಿರಾಯುವಾಗಲಿ ನಮ್ಮ ಸಂಬಂಧ
ಕೊನೆಯುಸಿರಿರುವರೆಗೆ!!!
ಸುಭದ್ರವಾಗಲಿ ಈ ಅನುಬಂಧ!
ಪರಶುರಾಮ ಸೃಷ್ಟಿ ಅಳಿಯುವವರೆಗೆ!!
ಇಂತಿ ನಿನ್ನ ಪ್ರೀತಿಯ
ಅಶು!!!!