Tuesday, October 31, 2017

ಮನವೆಂಬ ಸಾಗರ ಬತ್ತಿದ ಭಾವ
ಸಂತಸದ ಸೂರ್ಯ ಮುಳುಗಿದ ಕ್ಷಣ
ಯಾಕೋ ಮನ ಭಾರವೆನಿಸುತಿದೆ
ಗೊಂದಲಮಯ ನೂರಾರು ಆಲೋಚನೆಗಳು
ಬದುಕು ಮರುಭೂಮಿ ಎನಿಸುತಿದೆ
ಕಾರಣ ?
ಕಾರಣ ತಿಳಿಯಲು ಯತ್ನಿಸಿದಷ್ಟು ಮಗದಷ್ಟು ಪ್ರಶ್ನೆಗಳು
ಎಲ್ಲವು ಇದ್ದಂತಿದೆ ಆದರೂ ಏನೋ ಕಳೆದುಕೊಂಡೆನೆಂಬ ಧಿಗಿಲು 
ಸುಖಮಯ ಸಂಸಾರ, ಬೆನ್ನೆಲುಬಂತಿದೆ ಸಮೂಹ
ಆದರೂ ಏನೋ ನನ್ನ ತಡೆಯುತಿದೆ
ಪ್ರತಿ ಕ್ಷಣ ಪ್ರತಿ ಹೆಜ್ಜೆ ಕಷ್ಟಕರವೆನಿಸುತಿದೆ
ಕಾರಣ ಯಾವುದೇ ವ್ಯಕ್ತಿಯಾಗಿ ತೋರದೆ ಮನದೊಳಗಿನ ವ್ಯಕ್ತಿತ್ವವಾಗಿದೆ
ನನ್ನ ನಾನು ಸಮಾಧಾನಿಸಲು ಹರಸಾಹಸ ಪಟ್ಟರೂ ಇನ್ಯಾವುದೇ ಶಕ್ತಿ ನನ್ನ ಬಲಹೀನವಾಗಿಸಿದೆ
ಬೆನ್ನಹತ್ತಿರುವೆ ಆ ಕಾರಣವ ಹೊರಟು, ನಿರ್ಧರಿಸಿರುವೆ ಬಿಡಲಾರೆ ಬಿಡಿಸದೆ ಈ ಒಗಟು.
ಕೇಳುವುದೊಂದೇ ಆ ವಿಧಿಯಲ್ಲಿ
ನೀಡು ಶಕ್ತಿಯನ್ನು ಎದುರಿಸಲು ಪರೀಕ್ಷೆಯ, ಈ ಗೊಂದಲವ ನಿವಾರಿಸಲು!!!

ಇಂತಿ ನಿನ್ನ ಪ್ರೀತಿಯ
ಅಶು!!!!!

Tuesday, July 11, 2017

ದಡ ಸೇರಿದ ಅಂಬಿಗ!!!

ಒಲವಿನ ಬಾಳ ಸಂಗಾತಿಯ ತೋಳ್ಬಂಧಿಯಲ್ಲಿ
ಬೆಚ್ಚನೆಯ ಅಪ್ಪುಗೆಯ ಸ್ಪರ್ಶದ ಅನುಭವ
ರೋಮಾಂಚನ ಎನ್ನುದಕ್ಕಿಂತ ನಿರ್ಭಯತೆಯ ಭಾವ
ಮನಸಿನರಮನೆಯ ಪಟ್ಟದರಾಸಿಯಾಗಿ
ಪ್ರೇಮದ ಗೂಡಿನ ಒಡತಿಯಾಗಿ
ನನ್ನ ಮನೆದೇವರ ಮುದ್ದಿನ ಮಡದಿಯಾಗಿ
ಜೀವನದ ನೆಮ್ಮದಿಯ ಪಯಣ!!
ನನ್ನ ಬಾಳ ಸಿಂಗಾರ ನೀನು
ನನ್ನ ಕೊರಳ ಸೌಭಾಗ್ಯ ನೀನು
ನನ್ನ ಹಣೆಯ ಸಿಂಧೂರ ನೀನು 
ಪ್ರಿಯಕರನ ಪ್ರೇಮಕ್ಕಿಂತ ಅಮ್ಮನ ಮಮತೆ 
ಮಡದಿಯೆಂಬ ಒಲವಿಗಿಂತ ಕಂದನೆಂಬ ಅಕ್ಕರೆ 
ನನಗಿನ್ನೇನು ಬೇಕಿಲ್ಲ ಗೆಳೆಯ 
ಅಸೆ ಪಟ್ಟಿದ್ದು ಹಿಡಿ ಮುಷ್ಟಿಯಷ್ಟು
ದೇವರು ಕರುಣಿಸಿದ್ದು ಹಿಡಿದಿರಲಾಗದಷ್ಟು!!
ವಿಧಿಯ ಕ್ರೂರತೆಗೆ ಶಪಿಸುತಿದ್ದ ನಾನು
ದೇವರ ಆಟಗಳಿಗೆ ಕೈಕೊಂಬೆಯಾಗಿದ್ದ ನೀನು
ಎಲ್ಲವು ಪೂರ್ವನಿಯೋಜಿತ 
ಎಲ್ಲವು ಅನಿರೀಕ್ಷಿತ !!
ನಡೆದು ಬಂದ ಹಾದಿಯತ್ತ ಕಣ್ಣು ಹಾಯಿಸಿದಾಗ
ನಕ್ಕ ನೆನಪುಗಳಿಗಿಂತ ಅತ್ತ ತಿರುವುಗಳೇ ಹೆಚ್ಚು
ಎಲ್ಲವನು ಮರೆತು ನೆಮ್ಮದಿಯ ಸಾಮ್ರಾಜ್ಯದಲ್ಲಿ
ಎಲ್ಲರನು ಕ್ಷಮಿಸಿ ನಮ್ಮ ಪ್ರೀತಿಯ ಗುಡಿಯಲ್ಲಿ
ನಿರ್ಮಿಸೋಣ ನಮ್ಮ ಕನಸಿನ ಗೋಪುರವ 
ಒಂದಾಗಿ ಜೊತೆಯಾಗಿ 
ಎಂದೆಂದಿಗೂ ಜೊತೆ ನಡೆಯುವ ನಿನ್ನ ನೆರಳಾಗಿ!!

ಇಂತೀ ನಿನ್ನ ಪ್ರೀತಿಯ
ಅಶು !!

Thursday, March 9, 2017

ನಿನ್ನೊಲುಮೆಯ ಮಡಿಲಲ್ಲಿ !!!!!!

ಅದೆಷ್ಟೋ ಸಾರಿ ನನ್ನ ನಾನು ದ್ವೇಷಿಸಿದ ಕ್ಷಣಗಳು
ಎಂದಿಗೂ ಕಲ್ಪಿಸಿಕೊಂಡಿರದ ಈ ಮಧುರ ನಿಮಿಷಗಳು
ಎರಡಕ್ಕೂ ಅಜಗಜಾಂತರ ವ್ಯತ್ಯಾಸ !!
ಕಂಡ ಕನಸೆಲ್ಲ ಕಾಲ್ಪನಿಕವೆಂದು ಸಮಾಧಾನ ಪಡುತಿದ್ದ ನನಗೆ
ಕೊನೆಗೊಂದು ದಿನ ನೈಜವಾಗುತಿರುವ ಮಂದಹಾಸದ ನಗೆ!
ಎಲ್ಲಿರದ ಸಂತೋಷ ಮರುಕಳಿಸುತಿದೆ ಎಲ್ಲೇ ಮೀರಿ
ಮನಸೋತು ಹೋದೆ ಜೀವನದ ಅನಿರೀಕ್ಷಿತ ಸವಾರಿ !!!
ನನಗಾಗಿ ಹಂಬಲಿಸುವ ಜೀವವೊಂದನು ಕಂಡೆ
ಎಲ್ಲರನು  ಪ್ರೀತಿಸುವ ಮನಸಿಗೆ  ನಾ ಸೋತೆ !!
ಯಾವ ನೀರೀಕ್ಷೆ ಇಲ್ಲದೆ ಸಂಗಾತಿಯ ಬಯಸಿದ  ಜೀವವದು
ಪ್ರೀತಿಸಲು ಮಗಳ ಕಾಯುತಿದ್ದ ಕುಟುಂಬವದು !!
ಅದೃಷ್ಟವು ನನ್ನ ಅರಸಿ ಬಂದ ಭಾವನೆ
ಓ ವಿಧಿಯೇ !!!
ನಿನ್ನ ಆಟಕ್ಕೆ ನನ್ನ ನಮನಗಳು!!
ಎಲ್ಲವು ಸುಖಾಂತ್ಯವೆಂಬಂತೆ ಮುಗಿದ ಈ ಕನ್ಯಾ ಜೀವನ!
ಬೇಡುತಿರುವೆ ಭಗವಂತನಲ್ಲಿ ನೀಡು ಶಕ್ತಿಯನ್ನು  ಎದುರಿಸಲು ಈ ಬದುಕೆಂಬ ಕಾನನ !!
ಸಮೀಪಿಸುತೆ ಪಾಣಿಗ್ರಹಣದ ದಿನ
ಇರಲಿ ಎಲ್ಲರ ಆಶೀರ್ವಾದ ನಮ್ಮಿಬ್ಬರಿಗೆ ಅನುದಿನ !!
ಕಾಯುತಿರುವೆ ಈಗ ನಾನು ಮಧುವ ಹೀರಲು ಬಯಸಿದ ದುಂಬಿಯಂತೆ ಅನುಕ್ಷಣ !!
ಇಂತೀ ನಿನ್ನ ಪ್ರೀತಿಯ
ಅಶು !!!!!!!