Tuesday, July 11, 2017

ದಡ ಸೇರಿದ ಅಂಬಿಗ!!!

ಒಲವಿನ ಬಾಳ ಸಂಗಾತಿಯ ತೋಳ್ಬಂಧಿಯಲ್ಲಿ
ಬೆಚ್ಚನೆಯ ಅಪ್ಪುಗೆಯ ಸ್ಪರ್ಶದ ಅನುಭವ
ರೋಮಾಂಚನ ಎನ್ನುದಕ್ಕಿಂತ ನಿರ್ಭಯತೆಯ ಭಾವ
ಮನಸಿನರಮನೆಯ ಪಟ್ಟದರಾಸಿಯಾಗಿ
ಪ್ರೇಮದ ಗೂಡಿನ ಒಡತಿಯಾಗಿ
ನನ್ನ ಮನೆದೇವರ ಮುದ್ದಿನ ಮಡದಿಯಾಗಿ
ಜೀವನದ ನೆಮ್ಮದಿಯ ಪಯಣ!!
ನನ್ನ ಬಾಳ ಸಿಂಗಾರ ನೀನು
ನನ್ನ ಕೊರಳ ಸೌಭಾಗ್ಯ ನೀನು
ನನ್ನ ಹಣೆಯ ಸಿಂಧೂರ ನೀನು 
ಪ್ರಿಯಕರನ ಪ್ರೇಮಕ್ಕಿಂತ ಅಮ್ಮನ ಮಮತೆ 
ಮಡದಿಯೆಂಬ ಒಲವಿಗಿಂತ ಕಂದನೆಂಬ ಅಕ್ಕರೆ 
ನನಗಿನ್ನೇನು ಬೇಕಿಲ್ಲ ಗೆಳೆಯ 
ಅಸೆ ಪಟ್ಟಿದ್ದು ಹಿಡಿ ಮುಷ್ಟಿಯಷ್ಟು
ದೇವರು ಕರುಣಿಸಿದ್ದು ಹಿಡಿದಿರಲಾಗದಷ್ಟು!!
ವಿಧಿಯ ಕ್ರೂರತೆಗೆ ಶಪಿಸುತಿದ್ದ ನಾನು
ದೇವರ ಆಟಗಳಿಗೆ ಕೈಕೊಂಬೆಯಾಗಿದ್ದ ನೀನು
ಎಲ್ಲವು ಪೂರ್ವನಿಯೋಜಿತ 
ಎಲ್ಲವು ಅನಿರೀಕ್ಷಿತ !!
ನಡೆದು ಬಂದ ಹಾದಿಯತ್ತ ಕಣ್ಣು ಹಾಯಿಸಿದಾಗ
ನಕ್ಕ ನೆನಪುಗಳಿಗಿಂತ ಅತ್ತ ತಿರುವುಗಳೇ ಹೆಚ್ಚು
ಎಲ್ಲವನು ಮರೆತು ನೆಮ್ಮದಿಯ ಸಾಮ್ರಾಜ್ಯದಲ್ಲಿ
ಎಲ್ಲರನು ಕ್ಷಮಿಸಿ ನಮ್ಮ ಪ್ರೀತಿಯ ಗುಡಿಯಲ್ಲಿ
ನಿರ್ಮಿಸೋಣ ನಮ್ಮ ಕನಸಿನ ಗೋಪುರವ 
ಒಂದಾಗಿ ಜೊತೆಯಾಗಿ 
ಎಂದೆಂದಿಗೂ ಜೊತೆ ನಡೆಯುವ ನಿನ್ನ ನೆರಳಾಗಿ!!

ಇಂತೀ ನಿನ್ನ ಪ್ರೀತಿಯ
ಅಶು !!

No comments:

Post a Comment