ಮನವೆಂಬ ಸಾಗರ ಬತ್ತಿದ ಭಾವ
ಸಂತಸದ ಸೂರ್ಯ ಮುಳುಗಿದ ಕ್ಷಣ
ಯಾಕೋ ಮನ ಭಾರವೆನಿಸುತಿದೆ
ಗೊಂದಲಮಯ ನೂರಾರು ಆಲೋಚನೆಗಳು
ಬದುಕು ಮರುಭೂಮಿ ಎನಿಸುತಿದೆ
ಕಾರಣ ?
ಕಾರಣ ತಿಳಿಯಲು ಯತ್ನಿಸಿದಷ್ಟು ಮಗದಷ್ಟು ಪ್ರಶ್ನೆಗಳು
ಎಲ್ಲವು ಇದ್ದಂತಿದೆ ಆದರೂ ಏನೋ ಕಳೆದುಕೊಂಡೆನೆಂಬ ಧಿಗಿಲು
ಸುಖಮಯ ಸಂಸಾರ, ಬೆನ್ನೆಲುಬಂತಿದೆ ಸಮೂಹ
ಆದರೂ ಏನೋ ನನ್ನ ತಡೆಯುತಿದೆ
ಪ್ರತಿ ಕ್ಷಣ ಪ್ರತಿ ಹೆಜ್ಜೆ ಕಷ್ಟಕರವೆನಿಸುತಿದೆ
ಕಾರಣ ಯಾವುದೇ ವ್ಯಕ್ತಿಯಾಗಿ ತೋರದೆ ಮನದೊಳಗಿನ ವ್ಯಕ್ತಿತ್ವವಾಗಿದೆ
ನನ್ನ ನಾನು ಸಮಾಧಾನಿಸಲು ಹರಸಾಹಸ ಪಟ್ಟರೂ ಇನ್ಯಾವುದೇ ಶಕ್ತಿ ನನ್ನ ಬಲಹೀನವಾಗಿಸಿದೆ
ಬೆನ್ನಹತ್ತಿರುವೆ ಆ ಕಾರಣವ ಹೊರಟು, ನಿರ್ಧರಿಸಿರುವೆ ಬಿಡಲಾರೆ ಬಿಡಿಸದೆ ಈ ಒಗಟು.
ಕೇಳುವುದೊಂದೇ ಆ ವಿಧಿಯಲ್ಲಿ
ನೀಡು ಶಕ್ತಿಯನ್ನು ಎದುರಿಸಲು ಪರೀಕ್ಷೆಯ, ಈ ಗೊಂದಲವ ನಿವಾರಿಸಲು!!!
ಇಂತಿ ನಿನ್ನ ಪ್ರೀತಿಯ
ಅಶು!!!!!
No comments:
Post a Comment