Thursday, March 8, 2018

ಮತ್ತೆ ನಾ ಪದಗಳ ಬೆನ್ನೇರಿದಾಗ!!

ಸಮುದ್ರದ ಅಲೆಗಳು ಮೆತ್ತಗೆ ಮುತ್ತಿಟ್ಟ ಹಾಗೆ
ಸೂರ್ಯನ ಕಿರಣಗಳು ಬೆಚ್ಚಗೆ ಸ್ಪರ್ಶಿಸಿದ ಹಾಗೆ
ತಂಪಾದ ತಂಗಾಳಿಗೆ ಮರ ತಲೆದೂಗಿದ ಹಾಗೆ
ನಾ ಮತ್ತೆ ಬರೆಯಬೇಕೆಂಬ ಆಶಯ !!
ಮರಕ್ಕೆ ಬಳ್ಳಿ ತಬ್ಬಿಕೊಂಡಂತೆ ಆಶ್ರಯಕ್ಕಾಗಿ
ನಾನು ಮಗ್ನಳಾದಂತೆ ಸಂಸಾರದ ಸುಗಮಕ್ಕಾಗಿ
ಅದೆಷ್ಟೋ ಸನ್ನಿವೇಶಗಳು ನನ್ನ ಬರವಣಿಗೆಗೆ ಸ್ಪೂರ್ತಿಯಾದವೋ
ಮಗದೆಷ್ಟೋ ನೆನೆನಪುಗಳು ಮುನ್ನುಡಿಯಾದವೋ
ಹಿಂದಿರುಗಿ ನೋಡಿದಾಗ ನಾ ಕಂಡುಕೊಂಡಿದ್ದು
ಬರಿ ಅನುಭವಗಳ ಅಕ್ಷರ ಪುಂಜಗಳಷ್ಟೇ!!
ಬದುಕಿನ ಹಾದಿಯಲ್ಲಿ ನೆನಪುಗಳ ಮೈಲುಗಲ್ಲು
ಸ್ಪೂರ್ತಿಯಾದವು ಅದೆಷ್ಟೋ ಅನುಭವಗಳು!
ಧೃತಿಗೆಡಲಿಲ್ಲ ಇಂದಿಗೂ ಕಂಡು ಅದೆಷ್ಟೋ ಬಿರುಗಾಳಿಯ
ಎಲ್ಲದಕ್ಕೂ ಇರುವುದೊಂದು ದಿನ ಎಂಬ ಬೃಹತ್ ಮಹದಾಶಯ!
ನಾ ನಿರ್ಮಿಸಿದ ಸ್ವಪ್ನ ಲೋಕದಲ್ಲಿ ರಾಣಿಯಂತೆ
ಬಂಗಾರದಂದ ಸಿಂಧೂರ ಕೊಂಟ್ಟವನ ಪಟ್ಟದರಸಿಯಂತೆ
ನೂರಾರು ವರುಷ ಸುಖವಾಗಿರಲು ಬಯಸಿದೆ ಈ ಮನ
ಹಾರೈಕೆ ಇರಲಿ ತಮ್ಮಿಂದ ಅನುದಿನ!!
ಇಂತಿ ನಿನ್ನ ಪ್ರೀತಿಯ
ಅಶು!!!

No comments:

Post a Comment