ಓ ವಿಧಿಯೇ ನೀನೆಷ್ಟು ಕ್ರೂರಿ!
ಆಸರೆಯಾಗಿದ್ದಳು ಅವಳು ನನಗೆ ಅಮ್ಮನಾಗಿ
ಸಖಿಯಾಗಿ, ಸುಖ ದುಃಖ ಹಂಚುವ ಜೀವವಾಗಿ !
ಕಿತ್ತುಕೊಂಡೆಯಲ್ಲ ಒಂದಿಷ್ಟು ಕರುಣೆಯಿಲ್ಲದೆ
ಓ ವಿಧಿಯೇ ನೀನೆಷ್ಟು ಕ್ರೂರಿ!
ನೆನಪಿಲ್ಲ ನನ್ನ ಬಾಲ್ಯ ಅವಳೊಂದಿಗೆ
ಜೊತೆಗಿದ್ದಳು ವಯಸಿನಲ್ಲಿ ನನ್ನೊಂದಿಗೆ!
ಸೋತು ನಿಂತಾಗ ಆಶ್ರಯ ಕೊಟ್ಟಳು ಅವಳು ಅಮ್ಮನಂತೆ!
ಹಂಚಿಕೊಂಡಳು ಭಾವನೆಗಳನ್ನ ಜೀವದ ಗೆಳತಿಯಂತೆ!
ಕಸಿದುಕೊಂಡೆಯಲ್ಲ ಒಂದಿಷ್ಟು ಮಮತೆ ಇಲ್ಲದೆ
ಓ ವಿಧಿಯೇ ನೀನೇಷ್ಟು ಕ್ರೂರಿ!
ಕೈಗೆ ಕಾಸು ಕೊಟ್ಟು, ಉಡಲು ಬಟ್ಟೆಕೊಟ್ಟು
ಬೆರೆತಿದ್ದವಳು ನನ್ನ ನೋವಿನಲಿ, ನನ್ನ ಸಂಭ್ರಮದಲಿ
ತಪ್ಪು ಮಾಡಿದಾಗ ತಿದ್ದಿ, ಸರಿ ಎನಿಸಿದಾಗ ಕೊಂಡಾಡಿದವಳು
ಸಂತೋಷದಲಿ !!
ಕರೆದೊಯ್ದೆಯಲ್ಲ ಒಂದಿಷ್ಟು ಮಾನವೀಯತೆ ಇಲ್ಲದೆ
ಓ ವಿಧಿಯೇ ನೀನೆಷ್ಟು ಕ್ರೂರಿ!
ಮಾತಾಡದ ಮಾತುಗಳಿಲ್ಲ ಹಂಚಿಕೊಳ್ಳದ ವಿಷಯಗಳಿಲ್ಲ
ಆಲಿಸಿದಳು ನನ್ನ, ಮಗುವಂತೆ , ನೆಚ್ಚಿನ ಸಖಿಯಂತೆ!
ತನ್ನ ಮಕ್ಕಳಿಗೂ ನನಗೂ ಬೇಧವಿರಲಿಲ್ಲ ಅವಳಲ್ಲಿ
ಪ್ರತಿ ಮಾತಿಗೂ ನೀನು ಗ್ರೇಟ್ ಎನ್ನುತಿದ್ದವಳು
ಪ್ರತಿ ಕ್ಷಣವು ಬೆನ್ನೆಲುಬಾಗಿ ನಿಂತವಳು !
ಮರೆಯಾಗಿಸಿದೆಯಲ್ಲ ಒಂದಿಷ್ಟು ಕನಿಕರವಿಲ್ಲದೆ
ಓ ವಿಧಿಯೇ ನೀನೆಷ್ಟು ಕ್ರೂರಿ!
ಮುಂದೆ ನಿಂತು ನೆರವೇರಿಸಿದಳು ನನ್ನ ಪಾಣಿಗ್ರಹಣವ
ಜೊತೆಗಿದ್ದಳು ನನಸಾಗಿಸಲು ಆಸೆಗಳ ಕಣಕಣವ!
ಈಗಲೂ ನೆನಪಿದೆ ನನಗೆ ಅವಳ ಆ ಸಮಾಧಾನದ ಕಿರು ನಗೆ
ಸಂತೃಪ್ತಿಯಿಂದ ಅವಳು ನನ್ನತ್ತ ಬೀರಿದ್ದ ಮುಗುಳ್ನಗೆ !
ಮಗದಷ್ಟು ನನ್ನ ಎತ್ತರಕ್ಕೆ ಏರಿಸಿದವಳು ಅವಳು
ಧೈರ್ಯ ಸ್ಥೈರ್ಯವನ್ನು ಬಡಿದೆಬ್ಬಿಸಿದಳು ಅವಳು!
ಕೊನೆಯಾಗಿಸಿದೆಯಲ್ಲ ಒಂದಿಷ್ಟು ಭಾವನೆಗಳಿಲ್ಲದೆ!
ಓ ವಿಧಿಯೇ ನೀನೆಷ್ಟು ಕ್ರೂರಿ!
ಎಂದಿಗೂ ಕರೆದಿರಲಿಲ್ಲ ಅವಳ ಚಿಕ್ಕಮ್ಮನೆಂದು
ಅಕ್ಕನೆಂದರೆ ಓಗೊಡುತಿದ್ದಳು ಎಂದೆಂದು !
ನೀನು ಮರೆಯಾಗಿರಬಹುದು ಶಾರೀರಿಕವಾಗಿ
ನೀನೆಂದು ಅಮರ ನನ್ನೊಳಗೆ ಚಿರಾಯುವಾಗಿ!
ನೀನೊಂದು ಭರಿಸಲಾಗದ ಸಂಪತ್ತು
ಅನಿರೀಕ್ಷಿತವಾಗಿ ಕರೆದೊಯ್ಯಿತು ಆಪತ್ತು !
ಇಂದಿಗೂ ಅನಿಸಿಲ್ಲ ನೀನಿಲ್ಲವೆಂದು!
ಕಾಣಿಸಿಕೊಂಡೆಯಲ್ಲ ಸ್ವಪ್ನದಲ್ಲಿ ಜೊತೆಗಿರುವೆನೆಂದು !
ಕ್ಷಮಿಸಿಬಿಡು ಈ ಮಗಳ ನೋವಿಸಿದ್ದರೆ ನಿನ್ನ
ಚಿರಋಣಿ ನಾನು ಶಾಶ್ವತವಾಗಿ ಮುಚ್ಚುವವರೆಗೆ ಕಣ್ಣ!
ಬಯಸುತಿದೆ ನಿನ್ನ ಕಾಣಲು ಮಗದೊಮ್ಮೆ ನನ್ನ ಮನ
ಹುಟ್ಟಿಬರುವೆಯ ನನ್ನ ಮಡಿಲ ಕಂದನಾಗಿ ತೀರಿಸಲು ನಿನ್ನ ಋಣ!!!
ಇಂತಿ ನಿನ್ನ ಪ್ರೀತಿಯ
ಅಶು !!!