Friday, March 16, 2018

ಜನ ಮೆಚ್ಚಿದ ಶಿಕ್ಷಕಿ ನನ್ನ ಜಯವತಿ ಟೀಚರ್!!!!

ಅದೆಷ್ಟೋ ಗಿಡಗಳಿಗೆ ನೀರುಣಿಸಿ
ಹೆಮ್ಮರವಾಗಿಸಿದ ಜೀವ!
ಮುಗುಳ್ನಗೆಯ ಬೀರುತ
ಮರೆಮಾಚಿರುವಿರಿ ನೋವ!!
ಕಂಡೆ ನಿಮ್ಮಲ್ಲಿ ನಾನು ಮಾತೃ ಭಾವ!
ಮನದುಂಬಿ ಕರೆಯಲೇ ಅಮ್ಮ ಎಂದು ನಿಮ್ಮ!
ಜೀವನದ ಹಾದಿಯ ಪ್ರತಿಕ್ಷಣವೂ
ತಿದ್ದಿತೀಡಿದ ಗುರು ನೀವು!
ನಿನ್ನ ಹೆಮ್ಮೆಯ ಕನಸಿನ ಕೂಸುಗಳು ನಾವು!!
ಕಾಡಲಿಲ್ಲ ಗುರುಶಿಷ್ಯರ ಸಂಬಂಧ !
ಅದಾಗಿತ್ತು ತಾಯಿ ಮಕ್ಕಳ ಅನುಬಂಧ!!
ಬೇಡುವುದೊಂದೇ ಆ ಭಗವಂತನಲ್ಲಿ
ಸುಖವಾಗಿರಲಿ ನಮ್ಮಮ್ಮ ಸಂತೋಷದಲಿ!!
ಶುಭ ಹಾರೈಸುವೆ ನನ್ನ ನೆಚ್ಚಿನ ಗುರುವಿಗೆ
ಅರಳಲಿ ಮಗದಷ್ಟು ಮೊಗ್ಗುಗಳು ನಿಮ್ಮ ನಗುವಿಗೆ!!
ಜಗ ಬೆಳಗಿಸುವ ಸೂರ್ಯನ ತೇಜಸ್ಸು
ಜೀವನ ಬೆಳಗಿಸಿದ ಈ ಗುರುವಿನ ಮನಸ್ಸು
ಎಂದಿಗೂ ಚಿರಾಯುವಾಗಿರಲಿ, ಸುಖವಾಗಿರಲಿ !!
ಇಂತಿ ನಿಮ್ಮ ಮಗಳು
ಅಶು !!!

No comments:

Post a Comment