ಅವಳ ದನಿಗೆ ಅವನು ಮನಸೋತಾಗ
ಕಾಣದ ಹೃದಯಕ್ಕೆ ಅವನು ತಲೆಬಾಗಿದಾಗ
ಅರಿತು ಅರಿಯದೆ ತಾ ಕುರುಡು ಪ್ರೇಮಿಯಾದಾಗ
ಕಾಣದ ಬೆಳದಿಂಗಳ ಕಗ್ಗತ್ತಲ ಬಾನಲ್ಲಿ ಹುಡುಕಿದಂತಾಯಿತು!
ಇದು ವಿಧಿಯ ವಿಪರ್ಯಾಸವೋ ಅಲ್ಲ ಅವನ ಮೊಂಡುತನೋ
ಅವನಿಗೆ ಅರಿಯದೆ ಅವಳು ಅವನ ಮನಸ ಅವರಿಸಿದಳು
ಅವಳ ಕಾಣಬೇಕೆಂಬ ಹಂಬಲ ಮುಗಿಲೇರಿದಾಗ
ಅವಳಿಗೂ ಆ ಕುತೂಹಲ ಕೆರಳಿದಾಗ
ಕಾಣದ ಎರಡು ಜೀವಗಳು ಮುಖ ಮುಖಿಯಾದಂತಾಯಿತು!!
ಪ್ರತಿ ಕ್ಷಣ ಪ್ರತಿ ದಿನ ಅವರಿಬ್ಬರೂ ಹತ್ತಿರವಾದಾಗ
ತನ್ನ ಮನದಾಸೆಯ ಅವಳಲ್ಲಿ ಹೇಳಿದಾಗ
ಅದಕ್ಕೊಪ್ಪಿ ಅವಳು ಅವನ ಮನಸ ಮತ್ತಷ್ಟು ಆಕ್ರಮಿಸಿದಂತಾಯಿತು!!
ಹುಚ್ಚನಾದವನು ಅವಳ ಪ್ರೀತಿಯಲ್ಲಿ
ಮುಳುಗಿ ಏಳಲಾರದೆ ಅವಳ ಸ್ನೇಹದ ಕಡಲಲ್ಲಿ!!
ನಂಬಿದ್ದ ಅವನು ಅವಳನು ಅವನ ನೆರಳಂತೆ!
ಮೋಸ ಮಾಡದು ನೆರಳು ಜೊತೆಗಿರುವಂತೆ!
ಮರೆತನವನು ನೆರಳು ಸಹ ಕಣ್ಮರೆಯಾಗಬಹುದು
ಗ್ರಹಣಕ್ಕೆ ಸಿಕ್ಕ ಶಶಿಯಂತೆ!!!
ಕ್ಷಮಿಸಿದನು ಅವಳನು ಮತ್ತೂ ಮತ್ತೂ
ಮಾಡಿದ ತಪ್ಪನು ಅವನೊಳಗೆ ಅರಗಿಸಿಕೊಂಡು
ಅವಳ ಮೇಲಿನ ಪ್ರೀತಿಎಂಬ ಅಮೃತದ ತುತ್ತು
ವಿಷವಾದಾಗಲೂ ನಂಬಿದ್ದ ನೀಲಕಂಠನಂತೆ!
ಮರುಳನಾದನು ಅವನು ಅವಳ ನೆನಪಲಿ
ಅವಳ ಬಯಸಿ ಅವಳೊಳಗಿನ ಪ್ರೀತಿಯ ಅರಸಿ !
ಅಡ್ಡಿಯಾಗಲಿಲ್ಲ ಅವನಿಗೆ ಅವಳ ತಪ್ಪುಗಳು
ಕಾರಣ ಶರಣಾಗಿದ್ದವು ಅವನ ತನು ಮನಗಳು
ಕಲ್ಲೇಟಿಗಿಂತ ನೋವು ಕೊಟ್ಟಿದ್ದವು ಅವಳ ಆ ನಡವಳಿಕೆ
ಮರೆತರು ಕಣ್ಣೆದುರು ಬರುತಿದ್ದಳವಳು ಅನುಘಳಿಗೆ !
ಭುಗಿಲೆದ್ದಿತು ಅವನೊಳಗಿನ ತಾಳ್ಮೆಯ ಕಣಗಳು
ಸ್ಫೋಟಿಸಿತು ಅವನೊಳಗಿನ ಜ್ವಾಲಾಮುಖಿಯ ಅಣುಗಳು !
ಮುತ್ತಿಡ ಬಯಸಿದ ತುಟಿಗಳು ಅವಳ ಕಂಡು ಉಗಿಯುತು
ಆಲಂಗಿಸಬೇಕಾಗಿದ್ದ ಆ ಕೈಗಳು ಅವಳ ಕಂಡು ಉರಿಯುತು!!
ಅವನು ಮಾಡಿದ್ದ ಅಂದೊಂದು ದಿನ ಧೃಡ ನಿರ್ಧಾರವನು
ಹಿಚುಕಿ ಸಾಯಿಸಿದ್ದ ತನ್ನೊಳಗಿನ ಆಸೆಯನು!!
ಅವಳ ಮೇಲಿನ ಪ್ರೀತಿ ಪ್ರತಿ ಕ್ಷಣ ದ್ವೇಷವಾಗಿ
ಮುನ್ನುಗ್ಗಬೇಕೆಂಬ ಹಠ ಬಲವಾಗಿ
ವರುಷಗಳೇ ಕಳೆದರೂ ರೋಷ ಹಠವಾಗಿ!!
ಸಾಗುತಲಿದೆ ಜೀವನ ನಿರ್ಭಯವಾಗಿ!!!!
ಇಂತಿ ನಿನ್ನ
ನೊಂದ ಮನಸು!!
ಕಾಣದ ಹೃದಯಕ್ಕೆ ಅವನು ತಲೆಬಾಗಿದಾಗ
ಅರಿತು ಅರಿಯದೆ ತಾ ಕುರುಡು ಪ್ರೇಮಿಯಾದಾಗ
ಕಾಣದ ಬೆಳದಿಂಗಳ ಕಗ್ಗತ್ತಲ ಬಾನಲ್ಲಿ ಹುಡುಕಿದಂತಾಯಿತು!
ಇದು ವಿಧಿಯ ವಿಪರ್ಯಾಸವೋ ಅಲ್ಲ ಅವನ ಮೊಂಡುತನೋ
ಅವನಿಗೆ ಅರಿಯದೆ ಅವಳು ಅವನ ಮನಸ ಅವರಿಸಿದಳು
ಅವಳ ಕಾಣಬೇಕೆಂಬ ಹಂಬಲ ಮುಗಿಲೇರಿದಾಗ
ಅವಳಿಗೂ ಆ ಕುತೂಹಲ ಕೆರಳಿದಾಗ
ಕಾಣದ ಎರಡು ಜೀವಗಳು ಮುಖ ಮುಖಿಯಾದಂತಾಯಿತು!!
ಪ್ರತಿ ಕ್ಷಣ ಪ್ರತಿ ದಿನ ಅವರಿಬ್ಬರೂ ಹತ್ತಿರವಾದಾಗ
ತನ್ನ ಮನದಾಸೆಯ ಅವಳಲ್ಲಿ ಹೇಳಿದಾಗ
ಅದಕ್ಕೊಪ್ಪಿ ಅವಳು ಅವನ ಮನಸ ಮತ್ತಷ್ಟು ಆಕ್ರಮಿಸಿದಂತಾಯಿತು!!
ಹುಚ್ಚನಾದವನು ಅವಳ ಪ್ರೀತಿಯಲ್ಲಿ
ಮುಳುಗಿ ಏಳಲಾರದೆ ಅವಳ ಸ್ನೇಹದ ಕಡಲಲ್ಲಿ!!
ನಂಬಿದ್ದ ಅವನು ಅವಳನು ಅವನ ನೆರಳಂತೆ!
ಮೋಸ ಮಾಡದು ನೆರಳು ಜೊತೆಗಿರುವಂತೆ!
ಮರೆತನವನು ನೆರಳು ಸಹ ಕಣ್ಮರೆಯಾಗಬಹುದು
ಗ್ರಹಣಕ್ಕೆ ಸಿಕ್ಕ ಶಶಿಯಂತೆ!!!
ಕ್ಷಮಿಸಿದನು ಅವಳನು ಮತ್ತೂ ಮತ್ತೂ
ಮಾಡಿದ ತಪ್ಪನು ಅವನೊಳಗೆ ಅರಗಿಸಿಕೊಂಡು
ಅವಳ ಮೇಲಿನ ಪ್ರೀತಿಎಂಬ ಅಮೃತದ ತುತ್ತು
ವಿಷವಾದಾಗಲೂ ನಂಬಿದ್ದ ನೀಲಕಂಠನಂತೆ!
ಮರುಳನಾದನು ಅವನು ಅವಳ ನೆನಪಲಿ
ಅವಳ ಬಯಸಿ ಅವಳೊಳಗಿನ ಪ್ರೀತಿಯ ಅರಸಿ !
ಅಡ್ಡಿಯಾಗಲಿಲ್ಲ ಅವನಿಗೆ ಅವಳ ತಪ್ಪುಗಳು
ಕಾರಣ ಶರಣಾಗಿದ್ದವು ಅವನ ತನು ಮನಗಳು
ಕಲ್ಲೇಟಿಗಿಂತ ನೋವು ಕೊಟ್ಟಿದ್ದವು ಅವಳ ಆ ನಡವಳಿಕೆ
ಮರೆತರು ಕಣ್ಣೆದುರು ಬರುತಿದ್ದಳವಳು ಅನುಘಳಿಗೆ !
ಭುಗಿಲೆದ್ದಿತು ಅವನೊಳಗಿನ ತಾಳ್ಮೆಯ ಕಣಗಳು
ಸ್ಫೋಟಿಸಿತು ಅವನೊಳಗಿನ ಜ್ವಾಲಾಮುಖಿಯ ಅಣುಗಳು !
ಮುತ್ತಿಡ ಬಯಸಿದ ತುಟಿಗಳು ಅವಳ ಕಂಡು ಉಗಿಯುತು
ಆಲಂಗಿಸಬೇಕಾಗಿದ್ದ ಆ ಕೈಗಳು ಅವಳ ಕಂಡು ಉರಿಯುತು!!
ಅವನು ಮಾಡಿದ್ದ ಅಂದೊಂದು ದಿನ ಧೃಡ ನಿರ್ಧಾರವನು
ಹಿಚುಕಿ ಸಾಯಿಸಿದ್ದ ತನ್ನೊಳಗಿನ ಆಸೆಯನು!!
ಅವಳ ಮೇಲಿನ ಪ್ರೀತಿ ಪ್ರತಿ ಕ್ಷಣ ದ್ವೇಷವಾಗಿ
ಮುನ್ನುಗ್ಗಬೇಕೆಂಬ ಹಠ ಬಲವಾಗಿ
ವರುಷಗಳೇ ಕಳೆದರೂ ರೋಷ ಹಠವಾಗಿ!!
ಸಾಗುತಲಿದೆ ಜೀವನ ನಿರ್ಭಯವಾಗಿ!!!!
ಇಂತಿ ನಿನ್ನ
ನೊಂದ ಮನಸು!!
No comments:
Post a Comment