Thursday, June 11, 2015

ಮುಸುಕಿದೀ ಮಬ್ಬಿನಲಿ!!

ಆಸೆಗಳ ಬೆನ್ನೇರಿ,ಆಯಾಮದ ಕಟ್ಟು ಮೀರಿ
ನಿನ್ನ ಸ್ವಾಗತಿಸುವ ಬರದಲ್ಲಿ
ಮರೆತ್ತಿದ್ದೆ ನನ್ನ ನಾನು....
ಹೊಂಬೆಳಕ ಸ್ಪರ್ಶಕ್ಕೆ ಮನಸೋತು
ಆ ಶಶಿಯ ಕಂಡು ನಾಚಿ ಹೋಗಿತ್ತು ನನ್ನ ತನು!!
ಮಂಜಾನೆಯ ಹೊಂಬಿಸಿಲಿಗೆ
ಇಳಿಸಂಜೆಯ ಮಬ್ಬಿಗೆ ಕಾದಿತ್ತು ಈ ಕಣ್ಣು!!
ಪ್ರೀತಿಯ ಭರವಸೆಗಳು,ಅರಳಿದ ಕನಸುಗಳು
ನಂಬಿಕೆಯ ಹೂವುಗಳು!!
ಕಾದಿದ್ದವು ಈ ನಯನಗಳು,ವಿಶ್ವಾಸದಲಿ
ಮರೆತಿದ್ದವು ಇನಿಯನ ಸ್ಪರ್ಶದ ಆಸ್ವಾದದಲಿ!!!
ನಿನ್ನ ದನಿಗೆ ಶ್ರವಣಗಳು ಕಾದಿದ್ದವು ತವಕದಲಿ!!
ಕಣ್ಣಂಚಿನಲಿ ಚಿಮ್ಮಿ ಬಂದ ಹನಿಯೊಂದು
ಮುಗುಳ್ನಕ್ಕು ಹೇಳಿತ್ತು,
ನನಗಾಗಿ ನೀನು ನಿನಗಾಗಿ ನಾನು!!!
ಆದರೂ ಕಾದಿದ್ದೆ ನಿನಗಾಗಿ,ಮನದ ನೋವ ಬಚ್ಚಿಟ್ಟು!!
ಆ ಕಣ್ಣೀರ ಮಾತನು ಹುಸಿಯಾಗಿಸಲು,ಹಿಡಿದು ಪಟ್ಟು!!
ಮುಳುಗುವ ಆ ಸೂರ್ಯನ ಕಂಡು,
ಮುಗಿಲೇರಿ ನಿಂತ ಕಾರ್ಮುಗಿಲ ಕಂಡು
ಅಳುವುದೋ ನಗುವುದೋ ಎಂಬ ಸಂಶಯದಲಿ
ಅಮವಾಸ್ಯೆಯಲ್ಲಿ ಚಂದಿರನ ಹುಡುಕುವ ಕುರುಡಿಯಂತೆ!!!
ಕಾಯುತಿಹೆನು ಕಾಲಚಕ್ರವ ಮರೆತು!!!
ಇಂತಿ ನಿನ್ನ ಪ್ರೀತಿಯ
ಅಶು!!!!!

No comments:

Post a Comment