Thursday, June 11, 2015

???

ಕಾದೆ ನಾನು ನಿನಗಾಗಿ ಸಂವತ್ಸರಗಳನ್ನು ದೂಡಿ
ಕಾದಿದ್ದೆ ನಿನ್ನ ನೋಡಲು ಆತುರದಿ
ಬಹಳ ಹುಮ್ಮಸ್ಸು ನಿನ್ನ ಕಾಣಬೇಕೆಂಬ ತವಕ
ಹತೋಟಿ ತಪ್ಪಿತ್ತು ಮನ ನಿನ್ನ ಕಾಣಬೇಕೆಂಬ ಆಸೆಯಲಿ
ಕಾದೆ ಗೆಳೆಯ ನಿನಗಾಗಿ ಅಂದು ನಾನು
ಕ್ಷಣ ಕ್ಷಣವು ಸಮಯವ ನೋಡುತ
ದುಃಖ ಉಕ್ಕಿ ಹರಿದಿತ್ತು ನಿನ್ನ ದಾರಿ ಕಾದು
ಅನುಕ್ಷಣವು ಸ್ಪಂದನೆಯಿಲ್ಲದ ನಿನ್ನ ಸುಳಿವು
ಒಂದು ಕ್ಷಣ ಕಣ್ಮುಚ್ಚಿದಾಗ ಸುಳಿದಾಡಿತ್ತು ಸವಿ ನೆನಪುಗಳು
ಅದರೊಂದಿಗೆ ನಿನ್ನ ಸುಳಿವಿಲ್ಲದ ಕಹಿ ಕನಸುಗಳು
ಬಾಷ್ಪ ಹೊರಬಂದಿತ್ತು ಕಣ್ಣಂಚಿನಲಿ
ನಿನ್ನ ಆಗಮನಕ್ಕಾಗಿ ಕಾಯುತ್ತಿತ್ತು ಈ ತನು ಮನವು
ಸುಳಿವಿಲ್ಲ ಗೆಳೆಯ ನಿನ್ನ ಬಗ್ಗೆ
ಭಯವು ಕಾಡಿತ್ತು ಮನದೊಳಗೆ ಬಂದಿತ್ತಾಗಲೇ ಅಳುವು
ಯಾರನ್ನು ಕೇಳಲಿ,ಯಾರಲ್ಲಿ ಹೇಳಲಿ
ಸುಳಿದಾಡುತ್ತಿಲ್ಲ ಸುಳಿವು ಸುತ್ತಲೂ ಕಾಡುತ್ತಿದೆ ಮೌನವು
ಭಯವಾಗುತ್ತಿದೆ ಗೆಳೆಯ ನಿನ್ನ ದಾರಿಯ ಕಾದು
ನಿನ್ನ ಬರುವುವಿಕೆಯ ತವಕದಲಿ ನಾನಿರಲು
ನೀನೇ ಆ ಆಸೆಯ ಕಿತ್ತೆಸೆದೆಯಲ್ಲಾ?
ಕಾದು ಕಾದು ಸೋತಿರುವೆ, ಮತ್ತೆ ಮತ್ತೆ
ಗೆಲುವೇ ಕಾಣದ ಜೀವವಿದು
ಯಾಕೇ ಈ ತರದ ತಾತ್ಸಾರ ?
ಬೆಲೆಯಿಲ್ಲದಾಯಿತೇ ಈ ಬಾಳಿಗೆ..
ಆದರೂ ಮನ ನಿನ್ನ ಬಯಸುತ್ತಿದೆ ಗೆಳೆಯ!!!
ಏನು ಹೇಳಲಿ ಈ ಹುಚ್ಚು ಮನಸಿಗೆ..
ಎನುತಿಹುದು ಕಾಯುತ್ತಿರು ಕಾಲ ಕೂಡಿ ಬರುವವರೆಗೆ...!!!
ಕಾದಿರುವೆ ಗೆಳೆಯ ನಿನಗಾಗಿ ಅದೇ ಹುರುಪಿನಲಿ,ಉತ್ಸಾಹದಲಿ...!!!
ಇಂತಿ ನಿನ್ನ ಪ್ರೀತಿಯ
ಅಶು..

No comments:

Post a Comment