Thursday, June 11, 2015

ಒಲವೇ ನೀನೆಲ್ಲಿರುವೇ????

ಕಾದಿದ್ದೆ ಗೆಳೆಯ ನಿನಗಾಗಿ
ನಿನ್ನ ಬರುವಿಕೆ ಹುಸಿ ಎಂದು ತಿಳಿದಿದ್ದರು!
ಪ್ರತಿಕ್ಷಣವು ನಿನ್ನ ಆ ಸಿಹಿ ನೆನಪುಗಳೊಂದಿಗೆ
ನೀ ಉಡುಗೊರೆಯಾಗಿ ನೀಡಿ ಹೋದ
ಆ ಕಹಿ ನೋವುಗಳೊಂದಿಗೆ!
ಏನೇನು ಇಲ್ಲ ದ್ವೇಷ ನಿನ್ನ ಮೇಲೆ
ಕಾರಣ,ನೀ ಇನ್ನೂ ಇರುವೆ ಈ ಮನದೊಳಗೆ!
ಮರೆತು ಹೋದೆಯಾ ನೀನು
ಆ ಮಧುರ ಕ್ಷಣಗಳನ್ನು
ನಾವಿಬ್ಬರು ಜೊತೆಜೊತೆಗೆ ಕಳೆದ
ಆ ಸವಿ ದಿನಗಳನ್ನು!
ನೀನೇಕೇ ನಿಷ್ಠೂರಿಯಾದೆ?
ಕಾರಣ ಹುಡುಕುತಲಿರುವೆ ನಾನು
ಒಂದೂ ತಿಳಿಯದೆ!!!
ಭರವಸೆಯೆಂಬ ಕುದುರೆಯ ಬೆನ್ನ ಹತ್ತಿ
ಬಂದಿದ್ದೆ ನಾನು ನಿನ್ನ ಬಳಿಗೆ
ಇಳಿಸದೆ ನೀನು ಮರೆಯಾದೆ ಎಲ್ಲಿ?
ಪಡುತಿರುವೆ ಪಾಡು ನಾನಿಲ್ಲಿ
ನಿನ್ನ ದಾರಿ ಕಾಯುತ,ಅದೇ ಆಸೆಯಲಿ!!!
ನಿನ್ನ ದನಿ ಕೇಳದೆ,ನಿನ್ನ ನಗು ನೋಡದೆ
ಸೊರಗಿ ಹೋಗಿರುವೆ ನಾನಿಲ್ಲಿ,
ಅರಿಯದೆ ಹೋದೆಯ ಗೆಳೆಯ ನೀನಲ್ಲಿ!!
ಮನದ ದುಗುಢವನು ಕೇಳುವವರಾರು
ಭಯದ ಜೀವನದ ಹಾದಿಯಲಿ ಜೊತೆಯಾಗಲು!
ಆ ಆಶ್ವಾಸನೆಯ ಮಾತಿಗೆ ನಾ ಸೋತು ಹೋದೆನೇ?
ಅಲ್ಲ ನಿನ್ನ ಸಹಜತೆ ಹಾಗೇನು?
ತಿಳಿಯದೆ ಪಡುತಿರುವೆ ಪಾಡು
ಕೊನೆಗೊಳ್ಳುವುದೆಂದೋ ಈ ಉತ್ತರ ಹುಡುಕುವ ಜಾಡು?????
ಆದರೂ ಕಾದಿರುವೆ ಗೆಳೆಯ ನಿನಗಾಗಿ
ಅದೇ ನಿನ್ನ ಪ್ರೀತಿಯ ಸಖಿಯಾಗಿ
ಕಡಲ ಸೇರುವ ಮೀನಾಗಿ!!!!!
ಇಂತಿ ನಿನ್ನ ಪ್ರೀತಿಯ
ಅಶು!!!!!

No comments:

Post a Comment