Thursday, June 11, 2015

ನೆನಪುಗಳ ಕಚಕುಳಿಯ ಸೊಬಗು!!

ನಿನ್ನ ನೋಡುವ ತವಕ ಮನದೊಳಗೆ
ಕಾಣ ಹೇಳುತಿದೆ ಹೃದಯ ಮೆಲ್ಲಗೆ!
ಕಾರಣ ಹೇಳದೆ ಹೊರಟ ಇನಿಯನ
ಕರೆದು ಮಾತಾಡಿಸು ಎಂದು!!!
ಮುಸ್ಸಂಜೆ ಕಳೆವಾಗ ನಿನ್ನ ಸ್ಪರ್ಶದ ಅನುಭವ
ನೀ ನಿಂತಂತೆ ಹತ್ತಿರ ಮುರಿದು ನನ್ನ ಮೌನವ!!!
ಬಾರದೆ ಇರಲಾರೆ ಎಂಬ ನಂಬಿಕೆಯಲಿ
ಮಧುರ ನೆನಪುಗಳ ಆಸರೆಯಲಿ!
ನಿನ್ನ ಸಿಹಿ ಮುತ್ತಿನ ಉಸಿರಿನಲಿ!!
ನೀ ಬಳುವಳಿಯಾಗಿ ನೀಡಿದ ನೆನಪುಗಳಲಿ!!
ಕಂಡು ಕಾಣದ ನೋವಿನ ಕಚಕುಳಿಯು
ಹುಡುಕಿದರೂ ಸಿಗದ ನೆಮ್ಮದಿಯು!
ಕಾರಣ,ಮರೆತ್ತಿದ್ದೆ ನನ್ನ ನಾನು
ನಿನ್ನ ಪ್ರೀತಿಸುವ ಅವಸರದಲಿ,
ಅಮ್ಮನ ಜೋಗುಳಕೆ ನಿದ್ರೆ ಹೋದ ಕಂದನಂತೆ!!
ನಿನ್ನ ನೋಡುವಾಸೆ ಈ ಕಂಗಳಿಗೆ
ತಬ್ಬಿ ಮುದ್ದಾಡುವಾಸೆ ಈ ಕೈಗಳಿಗೆ
ಮುಂಜಾವಿನ ಕನಸಿನಲಿ,ನೀ ನನ್ನ ಅಪ್ಪಿದಂತೆ!
ಹಣೆ ಮೇಲೆ ಮುತ್ತಿಟ್ಟು ನೀ ಮುಗುಳ್ನಕ್ಕಂತೆ!!
ನಿಜವಾಗಬಹುದೇನೋ ಎಂಬ ಆಸೆ ಈ ಕನಸುಗಳಿಗೆ!!
ಮತ್ತದೇ ನೋವು,ಅದೇ ನೆನಪುಗಳು ಈ ಹೃದಯಕ್ಕೆ!!
ಸಾಂತ್ವನ ಹೇಳುವ ಬಲವಿಲ್ಲ,ಈ ಆತ್ಮಕ್ಕೆ!!
ಬದುಕಿರುವೆ ನಿನಗಾಗಿ ನಾನು
ನಿನ್ನ ನೆನಪುಗಳ ಮೆಲುಕು ಹಾಕುತ್ತ
ಮನದ ನೋವ ಮರೆಸುತ್ತ,!!
ಹಣೆ ಬರೆದ ಬ್ರಹ್ಮನ ಶಪಿಸುತ್ತ!!
ಕಾಯುತ್ತಿರುವೆ ನಾನು ಅದೇ ಹಳೆ ಭರವಸೆಯಲಿ!
ನಡೆಯುತ್ತಿರುವೆ ನಾನು ನೀ ಹೇಳಿಕೊಟ್ಟ ಪ್ರೀತಿಯ ದಾರಿಯಲಿ!!!
ಕಾದಿರುವೆ ನಿನಗಾಗಿ
ಧರೆಯ ಸೇರಲು ಕಾಯುತಿರುವ ಮಳೆಯಂತೆ!!
ಗಾನಕ್ಕಾಗಿ ಕಾದಿರುವ ಯಕ್ಷಿಯಂತೆ!!!
ಇಂತಿ ನಿನ್ನ ಪ್ರೀತಿಯ
ಅಶು!!!!!!!

No comments:

Post a Comment