Thursday, December 10, 2015

On demand for LATHA


ಮಾತಿನ ಮಿಂಚುಳ್ಳಿ ,ಮನವೆಂಬ ಈ ಬಳ್ಳಿ
ಹೇಳ ತೀರದ ಆ ಕಡಲ ಆರ್ಭಟ
ಬರೆಯಲು ಸಿಗದ ಸೇರಿ ಆಡಿದ ಆಟ!!
ಲತೆಯ ಆ ಕಂಪಿಗೆ,ಸವಾಲೆನಿಸುವ ಮಾತಿಗೆ
ಸಿಗುತ್ತಿಲ್ಲ ಪದಗಳು ನನಗೆ ,ಬರೆಯಲು ಈ ಲತೆಯ ಬಗ್ಗೆ!!
ಎಲ್ಲರೂ ಸೇರಿದಾಗ ಹೂದೋಟದ ನಾಯಕಿ
ಮಾತಿಗಿಳಿದರೆ ಪೋಣಿಸದ ಹಾಡಿನ ಗಾಯಕಿ!!
ತನಗರಿವಿಲ್ಲದೆ ಎಲ್ಲರ ನಗಿಸುವ ಆ ಗುಣ
ಗಾಂಭೀರ್ಯದಲ್ಲೂ ನಗುತರಿಸುವ ಕಾಜಾಣ!!
ಮನದಾಳದ ಅಡಗಿರುವ ಸತ್ಯ,ಹೊರಗೆಳೆಯಲು ಆಶಿಸದ ಮಿಥ್ಯ!!
ನಗುತಿರು ನಗಿಸುತಿರು ಎಂದೆಂದಿಗೂ ಹೀಗೆ
ಸುಖ ಸಂತೋಷಗಳ ಸರಿಗಮಗಳ ಹಾಗೆ!!!
ದೂರದ ಬೆಟ್ಟದ ಹೂವು ನೀನು
ಎಲೆ ಮರೆಯ ಕಾಯಿ ನೀನು!
ಕಾಣದ ಕೈಯ ಬೆಂಬಲ ನಿನ್ನದು
ಅರುಹಿಸಲಾಗದ ಜೀವಂತ ನಿದರ್ಶನ ಎಂದಿಗೂ ಕಾಣದು!!
ಕಲ್ಪನೆಗೂ ನಿಲುಕದ ನಿನ್ನ ನೋವು
ಕಾಡದಿರಲಿ ಎಂದಿಗೂ ನಿನ್ನ ಬಾಳಿಗೆ ಆ ಕಾವು!!
ನಗುತಿರು ಮಿನುಗುತಿರು ಆ ಬಾನಚುಕ್ಕಿಯಂತೆ
ಆಕಾಶಗಂಗೆಯ ಆ ಲತೆಗೆ ಮರುಳಾದ ಸೂರ್ಯನಂತೆ!!!
ಎಂದಿಗೂ ,ಮನಸ್ಸಿಂದ ಮನಸ್ಸಿಗಾಗಿ
ಇಂತೀ ನಿನ್ನ ಪ್ರೀತಿಯ
ಅಶು!!!!!!!!!!!!!!!!!!!

ON DEMAND FOR RESHMA

ಕಂಡಾಗ ನಿನ್ನ ಮೊದಲ ಸಲ
ಹೊಸದೆನಿಸಿದರೂ ಮಾತು ಬಲು ಅಪರೂಪ!
ಇದ್ದ ಹೂದೋಟದ ಮುಗ್ಧ ಗುಲಾಬಿ
ಆ ನಿನ್ನ ನಿಶ್ಕಲ್ಮಶ ನಗು, ಮಾತು
ಎಲ್ಲ ಎಲ್ಲವೂ ಮಾತಿಗೆ ನಿಲುಕದ್ದು!!
ಇಟ್ಟ ಹೆಸರಿನ ಜೀವಂತ ಕನ್ನಡಿ ನೀನು ರೇಷ್ಮಾ
ರೇಷ್ಮೆಗೂ ಸರಿಸಾಟಿಯಲ್ಲದ ಬೆಲೆ ಬಾಳುವ ಕುಸುಮ!!
ದಿನ ಕಳೆದಂತೆ ಹತ್ತಿರವಾಗಿದ್ದೆ ನೀನು
ಎಲ್ಲಾ ಮನ ಬಿಚ್ಚಿ ಮಾತಾಡುವಷ್ಟು
ಮರೆಮಾಚಲು ಹಿಂದೇಟು ಹಾಕುವಷ್ಟು!!
ಎಲ್ಲರ ಅಚ್ಚುಮೆಚ್ಚು ನೀನು!
ಕರೆದೊಯ್ಯಿತು ಕವಿತೆ ತುಂಬಿ ನನ್ನ ತನು!!
ನಿನ್ನ ಮುಗ್ಧ ನಗು, ಆ ಅಪರಂಜಿ ಮನಸು
ಆ ಅಕ್ಕರೆಯ ಸಕ್ಕರೆಯ ನುಡಿ
ಅದೇ ನಿನ್ನ ಬದುಕಿನ ಮುನ್ನುಡಿ!
ಇರುವಾಗ ಏಕೆ ಭಯ ಮುಖವೆಂಬ ಮನದ ಕನ್ನಡಿ!!!
ಕಂಡಾಗ ನೆನಪಾಗುವ ಪುಣ್ಯಕೋಟಿ ನೀನು!
ನಗುತಿರು ನೀನು ಸದಾ ಇನ್ನೂನು!!!
ಯಾಕೋ ಏನೋ ಅಕ್ಷರಗಳು ಸಂಕೋಚಪಡುತಿರಲು
ಮುಂದೆ ಬರೆಯಲು ನನ್ನ ಮನ ಪರಿತಪಿಸುತಿರಲು!!!
ಹೇಳ ಬಯಸಿದ್ದು ಬರೆಯಯಲಿಚ್ಚಿಸಿದ್ದು
ಎಲ್ಲವೂ ನನ್ನ ಕೈಗಳಿಗೆ ನಿಲುಕದ್ದು!!!
ಹಾರೈಸುವುದೊಂದೆ ಈ ಮನವು
ನೀನೊಂದು ನಗುವ ಪುಟ್ಟ ಕನಸಿನ ಹೂವು!
ಬಾಡದಿರಲಿ ,ಕಾಡದಿರಲಿ ನಿನಗಾವುದೇ ನೋವು!!!
ಮರೆಯದಿರು ನೀ ನಗುವ ರೀತಿ
ಚಿರಾಯುವಾಗಲಿ ಎಂದಿಗೂ
ನಾ ನಿನ್ನ ಸ್ನೇಹಲೋಕದ ಅತಿಥಿ!!!!
ಎಂದಿಗೂ ನಿನ್ನವಳು,
ಇಂತೀ ನಿನ್ನ ಪ್ರೀತಿಯ
ಅಶು!!!!!!!!!!!!!!!!!!!

Monday, October 5, 2015

ಆ ದಿನದ ಮುಸ್ಸಂಜೆ!!

ಬಿಟ್ಟಿರಲಾಗುತ್ತಿಲ್ಲ ನನಗೆ ನಿನ್ನ ಒಂದು ಕ್ಷಣ!
ಬಳಸಿ ಬಳಿ ಇರಬೇಕೆಂಬ ಆಸೆ ಮನದೊಳು ಅನುದಿನ!!
ಮನಸ್ಸು ಹಿಡಿತ ತಪ್ಪಿ ಮಾಡಿದೆ ಮನವ ತಲ್ಲಣ!
ಹೃದಯ ಬಡಿತ ಹೆಚ್ಚುತಿದೆ ಯಾಕೀ ನೋವು ತನುಮನ!
ಒಂದು ಕ್ಷಣ ನೀ ಕಣ್ಮುಂದೆ ಇಲ್ಲದಿರದ ಜೀವನ
ಅಕ್ಷರಶಃ ಎಂದೆಂದಿಗೂ ಇದು ಬರಿದಾದ ಕಾನನ!!!
ನಿನ್ನ ಬಿಸಿ ಅಪ್ಪುಗೆಯ ಸ್ಪರ್ಶ
ಮೈನವಿರೇಳಿಸುವ ಮರೆಯಲಾಗದ ಹರ್ಷ!!!
ತುಟಿಯ ಮೆತ್ತನೆಯ ಒತ್ತಿಗೆ  ಪುಟಿದೇಳುತಿದೆ ಮೈಮನ!!
ನಿನ್ನ ಬರದ ಸೆಳೆತಕೆ ಕಂಪಿಸುತಲಿದೆ ತನನ!!!
ನಿನ್ನ ಆ ಕಣ್ಕುಕ್ಕುವ ಕಣ್ಣೋಟ
ಬಲವಿಲ್ಲ ನನ್ನ ನಯನಗಳಿಗೆ ಎದುರಿಸಲು ತನ್ನತ್ತ!!!
ನಿನ್ನ ಆ ಬಿಸಿಯುಸಿರಿನ ಬೆಚ್ಚನೆಯ ಆಲಿಂಗನಕೆ
ಕರಗಿ ನೀರಾಗಿದೆ ಈ ಕಲ್ಲುಶಿಲೆ!
ಬಡಿದೆಬ್ಬಿಸಿದೆ ನನ್ನ ಮನದ ಶಾಂತ ಕಡಲ ಅಲೆ!!!
ಬಳಸಿ ನಿನ್ನ ಅಪ್ಪಿ ಮುದ್ದಾಡುವಾಸೆ ಈ ಕೈಗಳಿಗೆ!!
ಕಡಲ ಸೇರಲು ಕಾಯುವಾಸೆ ಈ ಅಕ್ಷಿಗಳಿಗೆ!!
ಹಾಲ್ಗಡಲ ಮತ್ತಲ್ಲಿ ಮೀಯುವಾಸೆ ಈ ಜೀವಕೆ!
ಹಾತೊರೆಯುತಿದೆ ಮುಗಿಲು ಭುವಿಯ ಭೇಟಿಗೆ!!!!
ನಿನ್ನ ಪ್ರೀತಿಯ ಕಡಲಲಿ ಮುಳುಗಿದವಳು
ಇಂತೀ ನಿನ್ನ ಪ್ರೀತಿಯ
ಅಶು!!!!!!!!!!!!!!!!!

Wednesday, July 29, 2015

ಮರೆಯಾದ ಮಾಣಿಕ್ಯ!!

Dr. A P J Abdul kalam sir! Rip
ದೇಶ ಕಂಡ ದಿವ್ಯ ಚೇತನ
ಭರತ ಭೂಮಿಯ ಹೆಮ್ಮೆಯ ಮಗನ
ಪಾದ ಪದ್ಮಗಳಿಗೆ ಇದೋ ಶತಕೋಟಿ ನಮನ
ಮನ ಬಯಸುತಿದೆ ಅರ್ಪಿಸಲು ನಿಮಗಾಗಿ ಈ ಕವನ!!
ನಾ ಕಂಡ ಸ್ಪೂರ್ತಿ ದೀವಿಗೆ
ನಾ ಮೆಚ್ಚಿದ ವ್ಯಕ್ತಿತ್ವ ಈ ಬಾಳಿಗೆ
ಎಲ್ಲರ ಬದುಕಿಗೆ ಮುನ್ನುಡಿ ನೀವು
ಸದ್ದಿಲ್ಲದೆ ಕರೆದೊಯ್ಯಿತು ಸಾವು!!
ಮಿಡಿಯುತಿಹುದು ಭಾರತೀಯರ ಮನವು
ಒದ್ದಾಡುತಿಹುದು ದುಃಖದಲಿ ತಾಯಿ ನೆಲವು!
ಕಾಣದ ಲೋಕಕ್ಕೆ ಸದ್ದಿಲ್ಲದ ಪಯಣ
ಉಳಿಸಿ ಹೋದ ನೆನಪುಗಳ ತಲ್ಲಣ!!
ಮರೆಯಲಾಗದು ಅಗಲಿದ ಈ ದಿನ
ಭಾರತ ಪಟ್ಟ ನಷ್ಟದ ಕರಾಳ ದಿನ!
ನೀಡಲಿ ಭಗವಂತ ಶಾಂತಿ ನಿಮ್ಮ ಆತ್ಮಕ್ಕೆ!
ಮತ್ತೆ ಹುಟ್ಟಿ ಬನ್ನಿ ,ವರವಾಗಿ ಈ ವಿಶ್ವಕ್ಕೆ!!!!
ಕಲಾಂ ನಿಮಗೊಂದು ಸಲಾಂ!!!
ಇಂತೀ ನಿಮ್ಮ
ಅಶು!!!!

Tuesday, July 14, 2015

ಕೊನೆಯ ಪುಟ!!!!!!!

ಕಾರ್ಮೋಡ ಕವಿದು ಮರೆಯಾದ ಸೂರ್ಯ ಮುಗುಳ್ನಕ್ಕಂತೆ!!!
ಕಲ್ಲಾದ ಹೂವು ಮತ್ತೆ ಪರಿಮಳ ಚಿಮ್ಮಿದಂತೆ!!
ನನ್ನ ನಾ ಕಳೆದುಕೊಳ್ಳುವ ಸೂಚನೆಯಂತೆ!
ಭಯ ಹೊತ್ತು ತರುತಿದೆ ಜೀವನದ ಸಂತೆ!!!!
ಅನುಭವಗಳ ಕಾಲ್ನಡಿಗೆಯಲ್ಲಿ ಕಳ್ಳು ಮುಳ್ಳಗಳ ವೇದನೆ!
ಹುಟ್ಟಿಲ್ಲದ ದೋಣಿಯ ಪಯಣಿಗಳು ನಾನಾದೆನೇ?
ಕೊನೆಯಿರದೆ ಈ ನೋವಿಗೆ ಬೆಲೆಯಿರದೆ ಈ ಭಾವನೆಗಳಿಗೆ?!
ಯಾಕೆ ಮತ್ತು ಮತ್ತು ಕಾಡುತಿಹುದು,
ಬೆಂದು ನೀರಾಗಿರುವಾಗಲೂ ಹಿಂಡುತಿಹುದು!!!
ಮುಚ್ಚಿದ ಪುಟ ತೆರೆಯಲು ಮನ ಬೇಡವೆಂದರೂ
ಈ ಹೃದಯ ಕೇಳುತ್ತಿಲ್ಲ ಇಷ್ಟೆಲ್ಲ ಆದರೂ!!!
ಗೋಡೆಯ ಮೇಲಿಟ್ಟ ದೀಪದಂತಾಯಿತೇ ಜೀವನ!??
ಹೇಗೆ ಕಾಪಾಡಲಿ ಹೊತ್ತು ಉರಿಯುತಿಹುದು ಕಾನನ!!!!
ಕಿಚ್ಚು ಹಚ್ಚಿಟ್ಟ ಜೀವನ ಮತ್ತೆ ಬಂದಿಹುದು ನನ್ನ ಅರಸುತ್ತ!!
ನೀರ ಹಾಕಿ ಪ್ರಯತ್ನಿಸುತಿಹುದು ಆರಿಸಲು ಅತ್ತಿತ್ತ!!!
ಉರಿದು ಉರಿದು ಇದ್ದಿಲಾದ ಜೀವನ
ಮುಗಿಸದೆ ವಿಧಿಯಿಲ್ಲ ಈ ಕವನ!!!
ಸಾಗುತಿಹುದು ಕೊನೆಯಿರದ ಪಯಣ!
ಎಂದು ಹಾಡುವುದೊ ನನ್ನ ಬಾಳ ಕಾಜಾಣ!!!!???
ಇಂತೀ ನಿನ್ನ. ಪ್ರೀತಿಯ
ಅಶು !!!!!!!

Wednesday, June 24, 2015

ನಾ ಕಂಡ ಕಿರಣನಿಗಾಗಿ on demand!!


A composition for my bro on demand Kiran Kumar

ನಾ ಕಂಡ ಕಿರಣ!!!!

ಬಿರುಗಾಳಿ ಎಬ್ಬಿಸುವ ದಿನಗಳವು
ನಿನ್ನ ಬಾಳಲ್ಲಿ
ಯಶಸ್ಸಿನ ಕನಸಿದ್ದರೂ
ಪರಿಸ್ಥಿತಿಯ ಕೈಗೊಂಬೆ ನೀನಲ್ಲಿ!
ಮಂದೇನೋ ಎಂಬ ಚಿಂತೆ ನಿನ್ನಲ್ಲಿ
ಸಿಕ್ಕಿಕೊಂಡಿದ್ದೆ ನೀನು ಆಡಿಸುವಾತನ
ಕೈಚಳಕದಲ್ಲಿ!!
ಕಂಡ ಕನಸುಗಳ ಕಿವುಚಿ ಹಾಕಲಾಗದ
ಆ ವಿಧಿಯ ಆಟದಲ್ಲಿ!
ಬದಲಾಗಿತ್ತು ನಿನ್ನ ಭವಿಷ್ಯದ ಹಾದಿ ಅಂದು
ಮೈಲಿಗಲ್ಲು ದಾಟಿ ತಿರುಗಿ ನೋಡಿದೆ ನೀ ಇಂದು!!
ಕಂಡಿರದ ಕನಸುಗಳ ನನಸಾಗಿಸುವ ಆಶಾವಾದಿಯಾಗಿ
ಬೆನ್ನತಟ್ಟಿ ಹುರಿದುಂಬಿಸುವ ಹೆತ್ತವರ ಆಕಾಶದೀಪವಾಗಿ!
ಹೌದು ನೀನಂದಿರುವುದು ನಿಜ
ನೀನು ಚಿನ್ನಾರಿಮುತ್ತ
ಎಲ್ಲರಿಗೂ ಸ್ಪೂರ್ತಿಯಾಗಿರುವೆ
ಜೀವನದ ಹಾದಿಯತ್ತ!!
ಮಣ್ಣಲ್ಲಿ ಬಿದ್ದದ್ದೂ ನಿಜ,ಮುಗಿಲಲ್ಲಿ ಎದ್ದದ್ದೂ ನಿಜ
ಸಂಶಯವೇ ಬೇಡ ಕಿರಣ
ಹುಡುಕದಿರು ಎಂದಿಗೂ ನೀ ಕಾರಣ!!
ಮರೆಯದಿರು ಎಂದಿಗೂ ನೀ
ಬಂದ ಹಾದಿಯನು!
ನಿನ್ನ ಜೊತೆಗಿರುವ ಸಾರ್ಥಕತೆಯ
ಭಾವವನು!!
ನೀ ನಡೆವ ಹಾದಿಗೆ ಹೂವಾಗುವ ಬಯಕೆಯಲ್ಲ
ಈ ತಂಗಿಗೆ!
ನೋವು-ನಲಿವಿಗೆ ನೆರಳಾಗುವಾಸೆ
ಈ ನನ್ನಣ್ಣನಿಗೆ!!
ಆರದಿರಲಿ ನಿನ್ನ ಛಲದ ಕಿಚ್ಚು!
ಆಗಲಿ ನಿನ್ನ ವ್ಯಕ್ತಿತ್ವ ಎಲ್ಲರಿಗೂ ಅಚ್ಚುಮೆಚ್ಚು!!
ನಿಲ್ಲಿದಿರಲಿ ನಿನ್ನ ಪ್ರಯತ್ನ
ಮೊದಲ ಯಶಸ್ಸಿಗೆ!
ಹೇಳಲು ಕಾಯುತಿಹುದು ಬಹಳಷ್ಟು ಬಾಯಿಗಳು
ಅದೆಲ್ಲ ನಿನ್ನ ಅದೃಷ್ಟದ ಕಾಣಿಕೆ!!
ಮರೆಯದಿರು ಎಂದಿಗೂ ಹೆತ್ತವರ!
ಯಾಕೆಂದರೆ ಅವರಿಗೆ ನೀನೇ ತಾನೆ
ದೇವರು ಕೊಟ್ಟ ವರ!!
ಮಿನುಗುತಿರು ನೀನು ಆಕಾಶದ ಶಶಿಯಂತೆ!
ಒಡೆಯನಾಗಿ ಸಹಸ್ರ ಚುಕ್ಕಿಗಳ ರಾಜನಂತೆ!!
With best wishes….
ಇಂತೀ ನಿನ್ನ ಪ್ರೀತಿಯ
ತಂಗಿ
ಅಶು!!!!

Thursday, June 11, 2015

ಮಾಯಗಾರನ ಮೋಡಿಯಲಿ!!

ಅಮವಾಸ್ಯೆಯ ರಾತ್ರಿಯಲ್ಲಿ 
ಮಿನುಗಿ ಬಂದ ಮಿಂಚುಹುಳದಂತೆ 
ನನ್ನ ಬಾಳಲ್ಲಿ ನೀ ಮಿನುಗಿ ಬಂದೆ..
ನೆಮ್ಮದಿಯಿಲ್ಲದ ಹಗಲಿರುಳು ಬೆಂದ ಮನಕೆ
ನೊಂದ ಜೀವಕೆ ಬೆಳಕ ಚೆಲ್ಲುವೆನೆಂದು ಕೊಂಡೆ
ಆದರೆ ತಿಳಿಸಿಕೊಟ್ಟೆ ಗೆಳೆಯಾ
ಮಿಂಚುಹುಳದಲ್ಲಿ ಇಹುದು
ಒಮ್ಮೆ ಬೆಳಕು ಒಮ್ಮೆ ಕತ್ತಲು
ಬೆಳಕ ಚೆಲ್ಲಿ ಕತ್ತಲಿನ ಪರದೆಯೆಳೆದೆ
ಚೆಲ್ಲಿದ ಬೆಳಕು ಚಿರವಾಗಲಿಲ್ಲ
ಮತ್ತೆ ಅದೇ ಕತ್ತಲು ಆವರಿಸಿತ್ತಲ್ಲ..
ಮಿಂಚುಹುಳದಂತೆ ಮಿಂಚಿ ಬಂದ
ನೀ ಮಾಯವಾದೆಯೆಲ್ಲಿ....?????
ಇಂತಿ ನಿನ್ನ ಪ್ರೀತಿಯ
ಅಶು

ಅವನಾರವನು?

ಅವನಾರವನು ಅವನಾರವನು
ಅವನಾರವನು ನಾ ತಿಳಿಯೆನು?
ತುಟಿಯಂಚಲಿ ನಗೆಯ ಸೂಸಿ
ಕಣ್ಣಂಚಿನಲಿ ಒಪ್ಪಿಗೆ ತಿಳಿಸಿ
ನನ್ನಿ ಮನದ ಹೂ ಬನದಲಿ
ಪ್ರೇಮದ ಕುವರನಾದವನು?
ಮನದ ದುಗುಡವ ಅಳಿಸಿ
ನಗುವೆಂಬ ಹೂ ಬೆಳೆಸಿ
ನನ್ನೀ ಹೃದಯದಾಳದ
ತಂತಿಯ ಮಿಡಿತವಾಗಿರುವವನೇ
ಅವನಾರು...????
ಸುಂದರ ಸ್ವಪ್ನದಲಿ ಬಂದು
ಪ್ರೀತಿಯ ಲಾಲಿ ಹಾಡಿ
ಹಾಯಾಗಿ ಮಲಗೆಂದು
ಸಿಹಿ ಮುತ್ತನಿಟ್ಟು ಮರೀಚಿಕೆಯಾದವನು
ಅವನಾರವನು ಅವನಾರವನು????
ಇಂತಿ ನಿನ್ನ ಪ್ರೀತಿಯ
ಅಶು

ಮನಸ್ಸೆಂಬ ಕನ್ನಡಿಯೊಳಗೆ!!

ಪ್ರೀತಿಯ ಆಸರೆಯಲ್ಲಿ ತೇಲಾಡುತ್ತಿವೆ
ಎಂಬ ಭ್ರಮೆಯಲ್ಲಿ ನಾನಿದ್ದೆ
ಆದರೆ ಆ ಪ್ರೀತಿ ನಿನ್ನಿಂದ ಏಕಿಲ್ಲ ಗೆಳೆಯ?
ನೀನು ನನ್ನ ಭಾವನೆಗಳ ಜೊತೆ 
ಚೆಲ್ಲಾಟ ಆಡುತಿರುವೆಯೆನು?
ಸರಿ,ಜೀವನ ಕಷ್ಟ ಸಾಧ್ಯ
ಅದೂ ತಿಳಿಯದವಳು ನಾನಲ್ಲ..
ಆದರೂ ನನ್ನ ಮನಸ್ಸೇಕೆ ನಿನಗೆ ಅರ್ಥವಗುತ್ತಿಲ್ಲಾ?
ಬಣ್ಣದ ಮೋಡಿಗೆ ಮರುಳಾದೆನೆ ನಾನು,
ಏಕೆ ಗೆಳೆಯ! ನಿನ್ನ ಕೈಗೊಂಬೆಗೆ ನೀನೆ ಬಣ್ಣ ಕೊಟ್ಟು ಈಗ
ನೀ ಬೇಡವೆಂದು ಸುಮ್ಮನಿರುವೆಯಲ್ಲಾ...!!!!
ಆದರೂ ಮನಸ್ಸು ನಿನ್ನ ಇನ್ನು ಬಯಸುತ್ತಿದೆಯಲ್ಲ
ಏನೆಂದು ಹೇಳಲಿ ಈ ಹಾಳು ಮನಸಿಗೆ...........
ನನ್ನ ನಿರ್ಮಲ ಪ್ರೀತಿಯ ನೀ ಅರಿಯದೆ ಹೋದೆಯಾ?
ನನ್ನ ಕಷ್ಟ ಮರೆತ್ತಿದ್ದೆ ನಿನ್ನ ಪ್ರೀತಿಯಲಿ
ಆದರೆ ಆ ಪ್ರೀತಿಯೆ ಮುಳ್ಳಾಯಿತೇ ಈ ಬಡ ಜೀವಕೇ?
ಯಾಕೆ ಹೀಗೆ ಗೆಳೆಯ...
ಕಾಯುತ್ತಿರುವೆ ನಿನ್ನ ಉತ್ತರಕ್ಕಾಗಿ
ನನ್ನ ಈ ಜೀವವ ಕೈಯಲ್ಲಿ ಹಿಡಿದು..
ಇಂತಿ ನಿನ್ನ ಪ್ರೀತಿಯ..
ಅಶು

ನಾ ಸ್ವಾರ್ಥಿ!

ನಿನ್ನ ನಾ ಕಂಡ ದಿನ
ನನ್ನ ಬಾಳ ಭಾಗ್ಯದ ಸುದಿನ
ನನ್ನ ಮನದ ಬಡಿತಕೆ ಸ್ಪಂದಿಸಿದೆ ನೀನು ಅನುದಿನ
ನಿನ್ನ ಆ ಕಣ್ನೋಟಕ್ಕೆ ಬಿದ್ದೆ ನಾನು ಆ ಕ್ಷಣ
ಏಳಲಾರದೆ ಪಡುತ್ತಿರುವೆ ಪಾಡು ಅನುಕ್ಷಣ
ನಿನ್ನ ತುಟಿಯಂಚಿನ ಕಿರು ನಗೆಗೆ
ನಾ ಸೋತು ನಿಂತಾಗ
ಕಣ್ ದೂರದಿ ನಿಂತು ನೀ ಮುಗುಳ್ನಕ್ಕಾಗ
ಮತ್ತೆ ಮಿಡಿಯಿತೀ ಮನ
ನೀ ನನ್ನವನೆಂದು...
ಇರಲಿ ಗೆಳೆಯ ಈ ಪ್ರೀತಿ ಶಾಶ್ವತ
ಚಿರಾಯುವಿನಂತೆ ಬಾನೆತ್ತರದಲಿ ತುಸುನಗುತ...
ಇಂತಿ ನಿನ್ನ ಪ್ರೀತಿಯ
ಅಶು

ಕಾದಿರುವೆ ಬೆಳಕಿಗಾಗಿ!!

ಕಾದ ದಿನಗಳೆಷ್ಟೋ ನಿನಗಾಗಿ
ನಿನ್ನ ಅಪ್ಪುಗೆಯ ಸೊಗಸಿಗಾಗಿ
ನಿನ್ನ ಮಧುರ ಪ್ರೀತಿಗಾಗಿ....!!
ಮಿಡಿಯಿತು ನನ್ನೀ ಮನ
ನಿನ್ನ ಮಾತಿನ ಕಂಪಿಗೆ
ಕರಗಿತು ಈ ತನು
ನಿನ್ನ ತೋಳಿನ ಸೊಂಪಿಗೆ
ನಿನ್ನ ಕಂಡಾಗಲೆಲ್ಲ ಏನೋ ಹರುಷ
ಮರೆತೆ ನಾನು ನನ್ನ ಆ ಕ್ಷಣ
ನೀ ನುಡಿಸಿದ ವೀಣೆಗೆ ತಂತಿ ನಾನಾದಾಗ
ರಾಗವು ಲಯ ಸೇರಿದಂತೆ ಆ ನಾದ!!
ಕಾದಿರುವೆ ಗೆಳೆಯ ತವಕದಲಿ
ನಿನ್ನ ಬರುವಿಕೆಯ ಕಾದು
ಬಾ ಇನಿಯ ,ಸೇರು ನನ್ನ ನೀ ಬಂದು
ಎಲ್ಲಿರುವೆ ನೀನು ? ಕಾದಿರುವೆ ನಾನು..!!!!!
ಇಂತಿ ನಿನ್ನ ಪ್ರೀತಿಯ
ಅಶು

???

ಕಾದೆ ನಾನು ನಿನಗಾಗಿ ಸಂವತ್ಸರಗಳನ್ನು ದೂಡಿ
ಕಾದಿದ್ದೆ ನಿನ್ನ ನೋಡಲು ಆತುರದಿ
ಬಹಳ ಹುಮ್ಮಸ್ಸು ನಿನ್ನ ಕಾಣಬೇಕೆಂಬ ತವಕ
ಹತೋಟಿ ತಪ್ಪಿತ್ತು ಮನ ನಿನ್ನ ಕಾಣಬೇಕೆಂಬ ಆಸೆಯಲಿ
ಕಾದೆ ಗೆಳೆಯ ನಿನಗಾಗಿ ಅಂದು ನಾನು
ಕ್ಷಣ ಕ್ಷಣವು ಸಮಯವ ನೋಡುತ
ದುಃಖ ಉಕ್ಕಿ ಹರಿದಿತ್ತು ನಿನ್ನ ದಾರಿ ಕಾದು
ಅನುಕ್ಷಣವು ಸ್ಪಂದನೆಯಿಲ್ಲದ ನಿನ್ನ ಸುಳಿವು
ಒಂದು ಕ್ಷಣ ಕಣ್ಮುಚ್ಚಿದಾಗ ಸುಳಿದಾಡಿತ್ತು ಸವಿ ನೆನಪುಗಳು
ಅದರೊಂದಿಗೆ ನಿನ್ನ ಸುಳಿವಿಲ್ಲದ ಕಹಿ ಕನಸುಗಳು
ಬಾಷ್ಪ ಹೊರಬಂದಿತ್ತು ಕಣ್ಣಂಚಿನಲಿ
ನಿನ್ನ ಆಗಮನಕ್ಕಾಗಿ ಕಾಯುತ್ತಿತ್ತು ಈ ತನು ಮನವು
ಸುಳಿವಿಲ್ಲ ಗೆಳೆಯ ನಿನ್ನ ಬಗ್ಗೆ
ಭಯವು ಕಾಡಿತ್ತು ಮನದೊಳಗೆ ಬಂದಿತ್ತಾಗಲೇ ಅಳುವು
ಯಾರನ್ನು ಕೇಳಲಿ,ಯಾರಲ್ಲಿ ಹೇಳಲಿ
ಸುಳಿದಾಡುತ್ತಿಲ್ಲ ಸುಳಿವು ಸುತ್ತಲೂ ಕಾಡುತ್ತಿದೆ ಮೌನವು
ಭಯವಾಗುತ್ತಿದೆ ಗೆಳೆಯ ನಿನ್ನ ದಾರಿಯ ಕಾದು
ನಿನ್ನ ಬರುವುವಿಕೆಯ ತವಕದಲಿ ನಾನಿರಲು
ನೀನೇ ಆ ಆಸೆಯ ಕಿತ್ತೆಸೆದೆಯಲ್ಲಾ?
ಕಾದು ಕಾದು ಸೋತಿರುವೆ, ಮತ್ತೆ ಮತ್ತೆ
ಗೆಲುವೇ ಕಾಣದ ಜೀವವಿದು
ಯಾಕೇ ಈ ತರದ ತಾತ್ಸಾರ ?
ಬೆಲೆಯಿಲ್ಲದಾಯಿತೇ ಈ ಬಾಳಿಗೆ..
ಆದರೂ ಮನ ನಿನ್ನ ಬಯಸುತ್ತಿದೆ ಗೆಳೆಯ!!!
ಏನು ಹೇಳಲಿ ಈ ಹುಚ್ಚು ಮನಸಿಗೆ..
ಎನುತಿಹುದು ಕಾಯುತ್ತಿರು ಕಾಲ ಕೂಡಿ ಬರುವವರೆಗೆ...!!!
ಕಾದಿರುವೆ ಗೆಳೆಯ ನಿನಗಾಗಿ ಅದೇ ಹುರುಪಿನಲಿ,ಉತ್ಸಾಹದಲಿ...!!!
ಇಂತಿ ನಿನ್ನ ಪ್ರೀತಿಯ
ಅಶು..

ವಿಧಿಯೆಂಬ ಕ್ರೂರಿ ಬೆನ್ನೇರಿದಾಗ!!

ಸ್ಪಂದನೆ ಇಲ್ಲದ ಬಾಳದು
ಬಳಲಿ ಬೆಂಡಾದ ಜೀವವದು
ಕಾದಿತ್ತು ನೆಮ್ಮದಿಗಾಗಿ
ಆಸೆಯ ಕೊರಳ ಎತ್ತಿ!!
ಕಾಡಿತ್ತು ಭಯವು ಭವಿಷ್ಯದ ಬಗ್ಗೆ
ಚಿಂತಿಸುತ್ತ ವರ್ತಮಾನದ ಕುರಿತು
ಆಸರೆಯ ಹಂಬಲಿಸುತ,ವಿಧಿಯಾಟಕ್ಕೆ ಸೋತಾಗ
ಕೋಲ್ಮಿಂಚಿನಂತೆ ಗೆಳೆಯನ ಆಗಮನ
ಮನದಲ್ಲಿ ಭಯದ ವಾತಾವರಣ
ಆದರೂ ಗೆಲ್ಲುವೆನೆಂಬ ಛಲ
ಕಾಯುತ್ತಿತ್ತು ಬಳ್ಳಿ ಮರದ ಆಸರೆಗಾಗಿ
ಬಿಗಿದಪ್ಪಲು ಇನಿಯನ ಬೆಚ್ಚನೆಯ ಸ್ಪರ್ಶಕ್ಕಾಗಿ
ಒಲವಿನ ಗೆಳೆಯನ ಮೆಚ್ಚಿನ ಸಂಗಾತಿ
ಇವರೀರ್ವರ ಜೀವನ,ಪ್ರೀತಿಯೆ ಇದರ ಅನುಭೂತಿ
ಗೆಳೆಯನ ಪ್ರಣಯದ ಸುಖದಲ್ಲಿ ಮೈ ಮರೆತಿದ್ದ ಆ ದಿನಗಳು
ಕಾದಿದ್ದಳು ಈ ರಾಧೆ ತನ್ನ ಕೃಷ್ಣನ ಆಗಮನಕ್ಕಾಗಿ ಆ ಸಂಜೆ
ಬಿಡುವಾಗಿತ್ತು ವಿಧಿಗೆ,ಅವರ ಕಾಣಲು ಆ ಕ್ಷಣ
ಸದ್ದಿಲ್ಲದೆ ನಿಂತಿತ್ತು ಇನಿಯನ ಎದೆಬಡಿತ
ಕಾಯದೆ ಅಂದು ತನ್ನ ಸಖಿಗಾಗಿ!
ಕಾರಣ?
ಆಕಸ್ಮಿಕ, ಅದರಲ್ಲೂ ಆ ಪಾಪಿ ವಿಧಿಯ ಕೈಚಳಕ!
ಕಾದಿದ್ದಳು ರಾಧೆ ತವಕದಲಿ ತನ್ನ ಮುರಳಿಗಾಗಿ
ಬಂದಿದ್ದ ಗೆಳೆಯ ಅಂದು ಅವನು ಶವವಾಗಿ!!
ದಿಗ್ಭ್ರಂಧಳಾದಳು ರಾಧೆ,ತನ್ನ ಇನಿಯನ ಮೌನಕೆ
ಹುಚ್ಚಿಯಂತೆ ನಗುತ,ಮುತ್ತನೀಯುತ ಆ ಮೌನದ ಮೊಗಕೆ
ತುಸು ಮೌನ,ತುಸು ನಗು ನಂಬಲಾರದೆ ವಾಸ್ತವದ ಸತ್ಯವನು
ಮರೆಯಲಾಗುತ್ತಿಲ್ಲ ಆ ಕಲ್ಪನಾ ಲೋಕದ ಪ್ರೇಮದ ನೀತಿಯನು
ತನ್ನಪ್ಪಿಕೊಳ್ಳುವ ಆ ಕೈಗಳ ಬರಸೆಳೆದು
ಕಣ್ಣೀರಧಾರೆಯ ತಡೆಯಲಾರದೆ
ನೋವ ಬಚ್ಚಿಡಲಾರದೆ...
ಶಪಿಸುತ್ತ ಆ ದೇವರ,ಇನ್ನೂ ಹೊರಬಾರದೆ ಆ ಲೋಕದಿಂದ
ತಾನಿದ್ದ ಆ ಕಲ್ಪನಾ ತಾಣದಿಂದ,ಇನಿಯನಿರುವನೆಂಬ ನಂಬಿಕೆಯಿಂದ!!
ಮತ್ತೂ ಕಾಯುತಿಹಳು ಆಸೆಯಲಿ..
ಅದೇ ದ್ವಾಪರಯುಗದ ರಾಧೆಯಂತೆ!!
ಇಂತಿ ನಿನ್ನ ಪ್ರೀತಿಯ
ಅಶು*****

ಒಲವೇ ನೀನೆಲ್ಲಿರುವೇ????

ಕಾದಿದ್ದೆ ಗೆಳೆಯ ನಿನಗಾಗಿ
ನಿನ್ನ ಬರುವಿಕೆ ಹುಸಿ ಎಂದು ತಿಳಿದಿದ್ದರು!
ಪ್ರತಿಕ್ಷಣವು ನಿನ್ನ ಆ ಸಿಹಿ ನೆನಪುಗಳೊಂದಿಗೆ
ನೀ ಉಡುಗೊರೆಯಾಗಿ ನೀಡಿ ಹೋದ
ಆ ಕಹಿ ನೋವುಗಳೊಂದಿಗೆ!
ಏನೇನು ಇಲ್ಲ ದ್ವೇಷ ನಿನ್ನ ಮೇಲೆ
ಕಾರಣ,ನೀ ಇನ್ನೂ ಇರುವೆ ಈ ಮನದೊಳಗೆ!
ಮರೆತು ಹೋದೆಯಾ ನೀನು
ಆ ಮಧುರ ಕ್ಷಣಗಳನ್ನು
ನಾವಿಬ್ಬರು ಜೊತೆಜೊತೆಗೆ ಕಳೆದ
ಆ ಸವಿ ದಿನಗಳನ್ನು!
ನೀನೇಕೇ ನಿಷ್ಠೂರಿಯಾದೆ?
ಕಾರಣ ಹುಡುಕುತಲಿರುವೆ ನಾನು
ಒಂದೂ ತಿಳಿಯದೆ!!!
ಭರವಸೆಯೆಂಬ ಕುದುರೆಯ ಬೆನ್ನ ಹತ್ತಿ
ಬಂದಿದ್ದೆ ನಾನು ನಿನ್ನ ಬಳಿಗೆ
ಇಳಿಸದೆ ನೀನು ಮರೆಯಾದೆ ಎಲ್ಲಿ?
ಪಡುತಿರುವೆ ಪಾಡು ನಾನಿಲ್ಲಿ
ನಿನ್ನ ದಾರಿ ಕಾಯುತ,ಅದೇ ಆಸೆಯಲಿ!!!
ನಿನ್ನ ದನಿ ಕೇಳದೆ,ನಿನ್ನ ನಗು ನೋಡದೆ
ಸೊರಗಿ ಹೋಗಿರುವೆ ನಾನಿಲ್ಲಿ,
ಅರಿಯದೆ ಹೋದೆಯ ಗೆಳೆಯ ನೀನಲ್ಲಿ!!
ಮನದ ದುಗುಢವನು ಕೇಳುವವರಾರು
ಭಯದ ಜೀವನದ ಹಾದಿಯಲಿ ಜೊತೆಯಾಗಲು!
ಆ ಆಶ್ವಾಸನೆಯ ಮಾತಿಗೆ ನಾ ಸೋತು ಹೋದೆನೇ?
ಅಲ್ಲ ನಿನ್ನ ಸಹಜತೆ ಹಾಗೇನು?
ತಿಳಿಯದೆ ಪಡುತಿರುವೆ ಪಾಡು
ಕೊನೆಗೊಳ್ಳುವುದೆಂದೋ ಈ ಉತ್ತರ ಹುಡುಕುವ ಜಾಡು?????
ಆದರೂ ಕಾದಿರುವೆ ಗೆಳೆಯ ನಿನಗಾಗಿ
ಅದೇ ನಿನ್ನ ಪ್ರೀತಿಯ ಸಖಿಯಾಗಿ
ಕಡಲ ಸೇರುವ ಮೀನಾಗಿ!!!!!
ಇಂತಿ ನಿನ್ನ ಪ್ರೀತಿಯ
ಅಶು!!!!!

ಮನ ಮತ್ತೆ ಚಿಗುರೊಡೆದಾಗ!!

ಕನಸು ನನಸಾಗಿ ಅರಳಿತು ಅನುರಾಗ
ಅನುರಾಗ ಸಾಗಿತ್ತು ನಿರ್ಮಲವಾಗಿ!
ಕಂಡ ಕನಸನ್ನು ನನಸಾಗಿಸುವ ತವಕದಲಿ
ಒಪ್ಪಿಬಿಟ್ಟೆ ನೀನೆ ನನ್ನ ನಲ್ಲನೆಂದು
ತಿಳಿದಿದ್ದೂ ನೀ ನನ್ನವನಲ್ಲವೆಂದು!!
ಆದರೆ ಕಾರ್ಮೋಡ ಒಂದು ಕವಿದಿತ್ತು
ಜೀವನವನ್ನೇ ಕೈಯಲ್ಲಿ ಹಿಡಿದು ಆಡಿಸಿತ್ತು!
ಅಂದುಕೊಂಡಿದ್ದೆ ನಾನೆಂತಹ ದುರಾದೃಷ್ಟಶಾಲಿ!!
ದಿನಾ ನರಳುತಿದ್ದೆ ನಿನ್ನ ನೆನಪಿನಲಿ
ಲೋಕದ ಮಾತಿಗೆ ಕಿವಿಗೊಡದೆ ನಿನ್ನ ಮೇಲಿನ ನಂಬಿಕೆಯಲಿ!
ನನ್ನ ಸ್ವಾರ್ಥವಿದ್ದರೂ,ಅದು ನಿಸ್ವಾರ್ಥ ಭಾವನೆ
ನಿನಗಾಗಿ ನಾ ಕಾದ ದಿನಗಳೆಷ್ಟೋ ನಾಕಾಣೆ
ಕಣ್ಣೀರಿನಲಿ,ಮನದ ಕಲ್ಲಿನ ಹೂವಿನಲಿ!!
ತಿಳಿದಿದ್ದೆ ಬರಬಹುದು ದಿನವೊಂದು ನನಗಾಗಿ
ಕಾದಿದ್ದೆ ಮನಸ್ಸು ಕಲ್ಲಾಗಿಸಿ ಆ ದಿನಕ್ಕಾಗಿ!!
ಆ ದಿನ ತಂದಿತ್ತು ಸುದಿನ
ಕಲ್ಲು ಮನಸರಳಿತ್ತು ಮತ್ತೆ ಹೂವಾಗಿ!
ನಿನ್ನ ಕಣ್ಣು ಮತ್ತದೇ ಮುಗ್ಧತೆಯ ತೋರಿ
ತಿಳಿಯದಂತೆ ಕ್ರಮಿಸಿತ್ತು ಮನಸ್ಸು ಜಾರಿ!
ಏನೋ ನಾ ಕಾಣೆ ಕಾರಣ ತಿಳಿಯೆನು
ಇನಿಯನ ಬರುವಿಕೆ ತಂದಿತ್ತು ಸಂತಸ
ಅದೇ ನಿನ್ನ ತೋಳ್ಭಂಧಿಯ ಆಸರೆಯಲಿ
ಸಾಗುತಿದೆ ಜೀವನ ಪಯಣದ ಹಾದಿಯಲಿ!!
ಇಂತಿ ನಿನ್ನ ಪ್ರೀತಿಯ
ಅಶು!!!

ನಿನ್ನ ಪ್ರೀತಿಸುವ ಭರದಲ್ಲಿ!!

ಜೀವನವೆಂಬ ನೀರಿನೊಳು
ಪ್ರೀತಿಯೆಂಬ ಮುತ್ತನ್ನು ಹುಡುಕಿ
ನಿಗದೆ ಪರದಾಡಿದೆ ಗತ ಜೀವನವ ಕೆದಕಿ!!
ಮೋಸವೆಂಬ ಮಾಯೆ ಕವಿದಾಗ
ಅರಿಯದೆ ಸಿಗುವುದೆಂಬ 
ಮನಸಿನೊಳಗನ ಆಸೆ ಬಚ್ಚಿಟ್ಟು ಕಾದೆ!!
ಪ್ರೀತಿಗಾಗಿ ನಾ ಹುಡುಕಾಡಿದೆ
ಸುತ್ತಮುತ್ತ ವರ್ತಮಾನವ ಮರೆತು ಭವಿಷ್ಯತ್ಕಾಲದತ್ತ!
ಜೀವಕೊಟ್ಟ ದೇವನ ಪ್ರೀತಿ ಅರಿಯದೆ
ಹೋದ ಮಾನವನ ರೀತಿ!!
ಸುಂದರ ಸುಖದ ಅಲೆ ವ್ಯಾಮೋಹದೊಳು ನಾ
ಪ್ರೀತಿಯೆಂದು ಎದ್ದು ಬಿದ್ದು ಮಿಂದೆನದರೊಳು!!
ಕಲ್ಪಿಸಿದ ಕಲ್ಪನೆಗೂ ಮೀರಿದ ತಳಹದಿ ಸಿಕ್ಕಿಹುದು
ಮುರಿದು ಬೀಳುವುದೆಂದೋ ಕಾಣೆ ನಾನು
ಆಸೆಯ ಬೆನ್ನ ಹತ್ತಿ ಓಡುತಿರುವೆ
ಹುಚ್ಚುಕುದುರೆಯಂತೆ ತಾನು!!
ಇಂತಿ ನಿನ್ನ ಪ್ರೀತಿಯ
ಅಶು !!!

ಪ್ರೀತಿಯಲ್ಲದೆ ನನ್ನ ಅಸ್ಥಿತ್ವ!!

ಯಾರು ನೀನು....??
ಹೌದು ಯಾರು ನಾನು?
ನಾ ಕಾಣೆ ನಾ ತಿಳಿಯೆ ಯಾರು ನಾನು?
ಎಲ್ಲಿಂದಲೋ ಆರಂಭ ಎಲ್ಲಿಗೋ ಮುಕ್ತಾಯ ಈ ಜೀವನ಻
ಈ ಮೂರು ದಿನದ ಆಟದಲ್ಲಿ ಯಾರು ನಾನು???
ಮಗುವಾಗಿ ಬಂದೆ ಈ ಭೂಮಿಗೆ
ಕಂಡೆ ಸಂತಸವ ಎಲ್ಲರಲ್ಲೂ
ಕನಸುಗಳು ತುಂಬಿದ್ದವು ಆ ಕಣ್ಣುಗಳಲಿ
ಕನಸು ನನಸಾಗಿಸುವ ಶಕ್ತಿ ಪಡೆಯಲು
ನಾನು ಯಾರು??
ಯೌವ್ವನಕ್ಜೆ ಬಂದೆ ಸ್ವಚ್ಚಂದವಾಗಿ
ಜೀವನದ ಭವಿಷ್ಯ ಕಂಡೆ ಸುಂದರವಾಗಿ
ಕನಸು ನನಸಾಗಿಸುವ ಆಸೆ ತುಂಬಿತ್ತು
ಆದರೆ ಅಸಾಧ್ಯವಾಗಿತ್ತು ಕಾರಣ ಯಾರು?
ಆಗಲೂ ಅನಿಸಿತ್ತು ನಾನು ಯಾರು?
ಮುಪ್ಪಿನಲ್ಲಿ ಕಂಡ ಕನಸು
ನನಸಾಗಿಸಿಲ್ಲ ನನ್ನ ಪೀಳಿಗೆಯೂ
ಮಣ್ನಾಗುವ ಈ ದೇಹ
ಕೇಳುವವರಾರು ನನ್ನ ಕನಸುಗಳನು
ಹೌದು ಯಾರು ನಾನು??
ಸಿಗಲಲ್ಲ ಉತ್ತರ ಕೊನೆಗೂ ನಾನು ಯಾರು?
ಕೊರಯುತ್ತಿದೆ ಮನದಲ್ಲಿ ಏನೀ ದೇವರ ಕಾರುಬಾರು?
ಇರುವುದು ಮೂರು ದಿನದ ಸಂತೆಯಾಟ
ಮುಗಿಯುತ್ತೆ ಅಲ್ಲಿಗೆ ಜೀವನದಾಟ
ಒಮ್ಮೊಮ್ಮೆ ಜೀವನ ರಂಗಿನಾಟ
ಕಾರಣವೇ ಆ ವಿಧಿಯಾಟ!!
ಈ ಜಗದಲ್ಲಿ ನಾನು
ನಿಗಲಲ್ಲ ಉತ್ತರ ಕೊನೆಗೂ
ವಾಸ್ತವದಲ್ಲಿ ಯಾರು ನಾನು?????

ಮರೆಯಲಾರದ ಮರೀಚಿಕೆ!!!!

ನಿರ್ಮಲ ಮುಗ್ಧ ಮನಸಿಗೆ
ಪ್ರೀತಿಯೆಂಬ ಮಾಯೆಯ ಪರಿಚಯ
ಮಾಡಿಕೊಟ್ಟವನು ನೀನಲ್ಲವೇ?
ಮೊದಲ ಪ್ರೀತಿ ನನ್ನದು ಮರೆಯಲಾಗುವುದೇ?
ಮನಸ್ಸಿನಾಳದಲ್ಲಿ ಆಸೆಯ ಸಸಿಗೆ
ನೀರೆರೆದು ಬೆಳೆಸಿದವನು ನೀನಲ್ಲವೇ?
ಮೊದಲ ಆಸೆ ನನ್ನದು ಮರೆಯಲಾಗುವುದೇ?
ಮನಸ್ಸಿನ ಮಿಡಿತಕ್ಕು ಹೃದಯದ ಬಡಿತಕ್ಕೂ
ಆಸರೆಯಾದವನು ನೀನಲ್ಲವೇ?
ಮೊದಲ ಮಿಡಿತ ನನ್ನದು ಮರೆಯಲಾಗುವುದೇ?
ಏನೋ ತಿಳಿಯದೆ ಹೋದೆನಲ್ಲ ಗೆಳೆಯಾ
ಮಾಯೆಯ ಸುಳಿಯಲ್ಲಿ ಸಿಕ್ಕಿಕೊಂಡಿರುವೆ
ಎಂದನಿಸಿದಾಗಲೆಲ್ಲಾ ಮನಸಲ್ಲೇನೋ ತಳಮಳ
ಅಂತರಾಳ ಮಿಡಿಯುತ್ತಿದ್ದರೂ
ತಿಳಿಯ ಹೇಳುತಿಹುದು ಈ ಹೃದಯ,ಕಾರಣ?
ಮೊದಲ ಪ್ರೀತಿ ನನ್ನದು ಮರೆಯಲಾಗುವುದೆ?
ಪ್ರೀತಿ ಮಧುರ,ತ್ಯಾಗ ಅಮರ
ಮಾತಿಗಷ್ಟೇ ಸೀಮಿತ,ಕಾರಣ
ಮೊದಲ ನೋವು ನನ್ನದು ಸಹಿಸಲಾಗುವುದೇ?
ಅಸಾಧ್ಯವೆಂಬ ಬೆನ್ನನೇರಿ,ಆತ್ಮವಿಶ್ವಾಸವೆಂಬ ಕಡಿವಾಣ ಹಿಡಿದು
ಸಾಗುತ್ತಲಿರುವೆನು,ನೀ ನನ್ನವನಾಗುವೆನೆಂದು,ಕಾರಣ?
ಮೊದಲ ಪ್ರೇಮ ನನ್ನದು,ಮರೆಯಲಾಗುವುದೇ????
ಇಂತಿ ನಿನ್ನ ಪ್ರೀತಿಯ
ಅಶು!!!!!!

ಮನ ಸೋತಾಗ!!

ಆಸೆಗಳ ಬೆನ್ನೇರಿ,ಆಯಾಮದ ಕಟ್ಟು ಮೀರಿ
ನಿನ್ನ ಸ್ವಾಗತಿಸುವ ಬರದಲ್ಲಿ
ಮರೆತ್ತಿದ್ದೆ ನನ್ನ ನಾನು....
ಹೊಂಬೆಳಕ ಸ್ಪರ್ಶಕ್ಕೆ ಮನಸೋತು
ಆ ಶಶಿಯ ಕಂಡು ನಾಚಿ ಹೋಗಿತ್ತು ನನ್ನ ತನು!!
ಮಂಜಾನೆಯ ಹೊಂಬಿಸಿಲಿಗೆ
ಇಳಿಸಂಜೆಯ ಮಬ್ಬಿಗೆ ಕಾದಿತ್ತು ಈ ಕಣ್ಣು!!
ಪ್ರೀತಿಯ ಭರವಸೆಗಳು,ಅರಳಿದ ಕನಸುಗಳು
ನಂಬಿಕೆಯ ಹೂವುಗಳು!!
ಕಾದಿದ್ದವು ಈ ನಯನಗಳು,ವಿಶ್ವಾಸದಲಿ
ಮರೆತಿದ್ದವು ಇನಿಯನ ಸ್ಪರ್ಶದ ಆಸ್ವಾದದಲಿ!!!
ನಿನ್ನ ದನಿಗೆ ಶ್ರವಣಗಳು ಕಾದಿದ್ದವು ತವಕದಲಿ!!
ಕಣ್ಣಂಚಿನಲಿ ಚಿಮ್ಮಿ ಬಂದ ಹನಿಯೊಂದು
ಮುಗುಳ್ನಕ್ಕು ಹೇಳಿತ್ತು,
ನನಗಾಗಿ ನೀನು ನಿನಗಾಗಿ ನಾನು!!!
ಆದರೂ ಕಾದಿದ್ದೆ ನಿನಗಾಗಿ,ಮನದ ನೋವ ಬಚ್ಚಿಟ್ಟು!!
ಆ ಕಣ್ಣೀರ ಮಾತನು ಹುಸಿಯಾಗಿಸಲು,ಹಿಡಿದು ಪಟ್ಟು!!
ಮುಳುಗುವ ಆ ಸೂರ್ಯನ ಕಂಡು,
ಮುಗಿಲೇರಿ ನಿಂತ ಕಾರ್ಮುಗಿಲ ಕಂಡು
ಅಳುವುದೋ ನಗುವುದೋ ಎಂಬ ಸಂಶಯದಲಿ
ಅಮವಾಸ್ಯೆಯಲ್ಲಿ ಚಂದಿರನ ಹುಡುಕುವ ಕುರುಡಿಯಂತೆ!!!
ಕಾಯುತಿಹೆನು ಕಾಲಚಕ್ರವ ಮರೆತು!!!
ಇಂತಿ ನಿನ್ನ ಪ್ರೀತಿಯ
ಅಶು!!!!!

ಮುಸುಕಿದೀ ಮಬ್ಬಿನಲಿ!!

ಆಸೆಗಳ ಬೆನ್ನೇರಿ,ಆಯಾಮದ ಕಟ್ಟು ಮೀರಿ
ನಿನ್ನ ಸ್ವಾಗತಿಸುವ ಬರದಲ್ಲಿ
ಮರೆತ್ತಿದ್ದೆ ನನ್ನ ನಾನು....
ಹೊಂಬೆಳಕ ಸ್ಪರ್ಶಕ್ಕೆ ಮನಸೋತು
ಆ ಶಶಿಯ ಕಂಡು ನಾಚಿ ಹೋಗಿತ್ತು ನನ್ನ ತನು!!
ಮಂಜಾನೆಯ ಹೊಂಬಿಸಿಲಿಗೆ
ಇಳಿಸಂಜೆಯ ಮಬ್ಬಿಗೆ ಕಾದಿತ್ತು ಈ ಕಣ್ಣು!!
ಪ್ರೀತಿಯ ಭರವಸೆಗಳು,ಅರಳಿದ ಕನಸುಗಳು
ನಂಬಿಕೆಯ ಹೂವುಗಳು!!
ಕಾದಿದ್ದವು ಈ ನಯನಗಳು,ವಿಶ್ವಾಸದಲಿ
ಮರೆತಿದ್ದವು ಇನಿಯನ ಸ್ಪರ್ಶದ ಆಸ್ವಾದದಲಿ!!!
ನಿನ್ನ ದನಿಗೆ ಶ್ರವಣಗಳು ಕಾದಿದ್ದವು ತವಕದಲಿ!!
ಕಣ್ಣಂಚಿನಲಿ ಚಿಮ್ಮಿ ಬಂದ ಹನಿಯೊಂದು
ಮುಗುಳ್ನಕ್ಕು ಹೇಳಿತ್ತು,
ನನಗಾಗಿ ನೀನು ನಿನಗಾಗಿ ನಾನು!!!
ಆದರೂ ಕಾದಿದ್ದೆ ನಿನಗಾಗಿ,ಮನದ ನೋವ ಬಚ್ಚಿಟ್ಟು!!
ಆ ಕಣ್ಣೀರ ಮಾತನು ಹುಸಿಯಾಗಿಸಲು,ಹಿಡಿದು ಪಟ್ಟು!!
ಮುಳುಗುವ ಆ ಸೂರ್ಯನ ಕಂಡು,
ಮುಗಿಲೇರಿ ನಿಂತ ಕಾರ್ಮುಗಿಲ ಕಂಡು
ಅಳುವುದೋ ನಗುವುದೋ ಎಂಬ ಸಂಶಯದಲಿ
ಅಮವಾಸ್ಯೆಯಲ್ಲಿ ಚಂದಿರನ ಹುಡುಕುವ ಕುರುಡಿಯಂತೆ!!!
ಕಾಯುತಿಹೆನು ಕಾಲಚಕ್ರವ ಮರೆತು!!!
ಇಂತಿ ನಿನ್ನ ಪ್ರೀತಿಯ
ಅಶು!!!!!

"ಅಂತರಾಳದ ಅಂತರಂಗ"


ತುಟಿಯಂಚಿನಲಿ ನಗೆಯ ಬೀರಿ
ಕಣ್ಣಂಚಿನಲಿ ಸನ್ನೆ ಮಾಡಿ
ನನ್ನೀ ಮನದ ಅಂಚಿನಲಿ
ಆಸೆಯ ಹೂ ಅರಳುವಂತೆ ಮಾಡಿದೆ!!
ಆ ಹೂವಿನ ಮನಸಿಗೆ ನಾ ಸೋತು
ಒಪ್ಪಿಗೆ ಸೂಚಿಸಿದೆ ಮನದಾಸೆಯಂತೆ
ತಿಳಿದಿದ್ದರೂ ಆ ವಿಧಿಯ ಬಗ್ಗೆ
ಮನಸ್ಸು ಕೇಳಲಿಲ್ಲವಲ್ಲ ಗೆಳೆಯಾ!!
ನಿನ್ನ ಮಾತಿನ ಮೋಡಿಗೆ ಮರುಳಾಗಿ
ಸೋತು ನಾನು,ಕಳಕೊಂಡೆ ನನ್ನ ಮನಸ್ಸ ನಿನ್ನಲ್ಲಿ
ಇನಿಯಾ,ಹುಡುಕುತಿರುವೆ ಆ ಮನಸ್ಸ ಈಗ ಎಲ್ಲೆಲ್ಲಿ!!!
ತಿಳಿದಿದ್ದೆ ಮುಖ ಮನಸಿನ ಕನ್ನಡಿಯೆಂದು
ಅರಿಯದೆ ಹೋದೆನೇ ನಿನ್ನ ಮನಸ್ಸು ಬರಿ
ಕಲ್ಮಶದ ಮುಖವಾಡವೆಂದು!!!
ತಿಳಿದೂ ಏಕೆ ನಡೆದೆ ತಪ್ಪು ಹಾದಿಗಳಲ್ಲಿ
ಮರೆತೆಯಾ ತಾಳ್ಮೆಯೇ ಜೀವನ
ಈ ಬಾಳ ನೌಕೆಯಲಿ!!!
ನೀನೇಕೆ ತಿಳಿಯಲಿಲ್ಲ ಮುಷ್ಠಿಯಲ್ಲಿಹುದು ಭವಿಷ್ಯ
ಬಳುವಳಿಯಾಗಿ ನೀಡಲೇನು ನನ್ನ ಆಯುಷ್ಯ!
ಕಾರಣ,ಮನ ನಿನ್ನ ಬಯಸುತಿದೆ ಅನಾವಶ್ಯ!!!
ಏನು ಹೇಳಲಿ ಈ ಹಾಳು ಮನಸಿಗೆ
ಒಂದೇ ಹೇಳುತಿಹುದು
ಕಾಯುತಿರು ಹೀಗೆ,ಜೀವನ ಕೊನೆವರೆಗೆ!!!
ಕಾದಿರುವೆ ಗೆಳೆಯ ನಿನಗಾಗಿ ತವಕದಲಿ
ಮನದ ದುಃಖವ ಕಲ್ಲಾಗಿಸಿ ಆಸೆಯಲಿ!
ನಿನಗಾಗಿ ಕಾಯುತಿರುವೆ ನಾನಿನಲ್ಲಿ
ಬಾರದೆ ನೆನಪು ನಿನಗಲ್ಲಿ!!
ಕನಸಿನ ಕುವರನ ಆಗಮನಕಾಗಿ
ನಿನ್ನ ಪಟ್ಟದರಸಿಯಾಗುವ ಉತ್ಸಾಹದಲಿ!!
ಕಾಯುತಿರುವೆ ನಿನಗಾಗಿ
ಉಸಿರಾಡುವ ಶವದಂತೆ!!!!!!!!
ಇಂತಿ ನಿನ್ನ ಪೀತಿಯ
ಅಶು!!!!!!

ಒಲವಿನ ಗೆಳೆಯನಿಗೆ!!

ಒಲವಿನ ಗೆಳೆಯ,
ನಿನ್ನ ತೋಳ್ಬಂಧಿಯ ಬೆಚ್ಚನೆಯ ಸುಖಕ್ಕೆ ಹಾತೊರೆಯುವ ನಿನ್ನ ಈ ಗೆಳತಿಯ ಓಲೆ ಇದು.
ಗೆಳೆಯ,ಪ್ರೀತಿಯ ಸಸಿಗೆ ನಾವಿಬ್ಬರು ನೀರುನಿಸಿದ್ದ ಕ್ಷಣಗಳು ಕಣ್ಣ ಮುಂದೆ ಹಾಯಿತ್ತಿರಲು,ನಿನ್ನ ಕಾಣಬೇಕೆಂಬ ಹಂಬಲ ನನ್ನ ಮನದ ಕಡಿವಾಣ ಕಡಿದು ಹೋಗುತ್ತಿದೆ.ನಿನ್ನ ಪ್ರೀತಿಯ ಅರಮನೆಯಲ್ಲಿ ನಿನ್ನ ಪಟ್ಟದರಸಿ ಆಗಬೇಕೆಂಬ ನನ್ನ ಕನಸು,ನನಸಾಗುವ ಸುಸಂದರ್ಭಕ್ಕೆ ಹಾತೊರೆಯುತ್ತಿದೆ ಮನಸ್ಸು.
ನಿನ್ನ ಆ ತುಟಿಯಂಚಿನ ಮುಗುಳ್ನಗು,ನಿನ್ನ ಕಣ್ಣ ಸನ್ನೆಯಲ್ಲಿ ತುಂಬಿ ಕರೆವ ನೋಟ,ನಿನ್ನ ಹೆಜ್ಜೆ ಹೆಜ್ಜೆ ನೆನಪು,ನಿನ್ನ ಆ ಸ್ಪರ್ಶ,ಮರಳಿ ಮರಳಿ ನನ್ನನ್ನು ಸ್ನೇಹಲೋಕಕ್ಕೆ ಪಯಣಿಸುವಂತೆ ಮಾಡುತ್ತಿದೆ....
ನಾವು ಜೊತೆಗೂಡಿ ಕಳೆದ ಆ ಸುಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದರೆ ಮತ್ತೊಮ್ಮೆ ಮಗದೊಮ್ಮೆ ನಿನ್ನ ತೋಳ್ತೆಕ್ಕೆಯಲ್ಲಿ ಮಗುವಾಗುವ ಹಂಬಲ ನನ್ನ ಮತ್ತೆ ಮತ್ತೆ ಕಾಡುತ್ತಿಲಿದೆ ಗೆಳೆಯ!!
ಏನು ಸುಸಮಯವದು,ನಿನ್ನ ಎಲ್ಲೆ ಇಲ್ಲದ ತುಂಟಾಟದ ಮಾತು,ಗುಣ ತುಂಬ ತುಂಬಾನೇ ಇಷ್ಟವಾಗಿತ್ತು ನನಗೆ..ನಾ ಕೋಪಿಸಿಕೊಂಡಾಗ ಆ ನಿನ್ನ ಸಮಾಧಾನಿಸುವ ಮಾತಿನ ಪರಿ,ಮಿಂಚಿನಂತೆ ನನ್ನ ಸೀಳಿ ಬಂದು ಪರಿಹಾಸ್ಯ ಮಾಡಿತ್ತಿರುವ ಅನುಭವ!!!
ಹೌದು,ಗೆಳೆಯ,ಅಕ್ಷರಶಃ ಸತ್ಯ ನಿನ್ನ ಒಲವಿನ ವೀಣೆಯ ನಾದಕ್ಕೆ ನಾ ಮಗ್ನಳಾಗುವಲ್ಲಿ ನಿನ್ನ ತಪ್ಪೇನು ಇಲ್ಲ!!ಎಲ್ಲೂ ಸಿಗದ ಪ್ರೀತಿ,ಆಸರೆ,ನಗು,ಸಾಂತ್ವಾನ ನಾನು ನಿನ್ನಿಂದ ಕಂಡಾಗ,ನಾನೆಷ್ಟು ಭಾಗ್ಯಶಾಲಿ ಎಂಬ ಜಂಬದ ಭಾವ ಈಗಲೂ ನನ್ನ ಹಾದು ಹೋಗುತ್ತಿದೆ!!!
ನಮ್ಮ ಆ ದಿನಗಳು,ಆ ಕ್ಷಣಗಳು ,ತಂಪಾದ ತಂಗಾಳಿಯಂತೆ,ಇಳಿ ಸೂರ್ಯನ ಹೊಂಬಿಸಿಲಿನಂತೆ,ಅರಳುವ ಮೊಗ್ಗಿಗೆ ದುಂಬಿ ಆಲಂಗಿಸಿ ಮುತ್ತನಿಟ್ಟಂತೆ... ಆದರೆ ಈ ರಾಧೆಯ ಏಕಾಂಗಿಯಾಗಿಸಿ ನೀ ಮರೆಯಾದೆಯೆಲ್ಲಿ? ಕಣ್ಮರೆಯಾದ ಕ್ಷಣದಿಂದ ಕಾದು ಕಾದು ಸೋತು ಹೋಗಿರುವೆ ನಾನು....ಯಾಕೇ ಈ ಕಣ್ಣಮುಚ್ಚಾಲೆಯಾಟ? ಪ್ರತಿದಿನ ಪ್ರತಿಕ್ಷಣ ಮನೆಯ ಬಾಗಿಲ ಮುಂದೆ ಕೂತಾಗ,ತಂಗಾಳಿ ನನ್ನ ಸೋಕಿ,ತಟ್ಟಿ ಎಚ್ಚರಿಸುತ್ತಿತ್ತು,"ಯಾಕೆ ರಾಧೆ ಒಬ್ಬಂಟಿ ನೀನಾದೆಯಾ,ನಿನ್ನ ಮುರಳಿಯ ಕಾದು,ನಾ ಕೊಂಡೊಯ್ಯಲೇ ನಿನ್ನ ಪ್ರೇಮ ಸಂದೇಶವನು""?
ಮತ್ತೆ ಮತ್ತೆ ಕಾಡುವ ಆ ನೆನಪುಗಳು ನಿನಗಾಗಿ ಹಂಬಲಿಸುವ ಈ ಮನದ ಮಿಡಿತವ ನೀ ಏಕೆ ಅರಿಯಲಾರದೆ ಹೋದೆ?
ಬಾ ಗೆಳೆಯ,ಬಂದು ಬಿಡು ಒಮ್ಮೆ ನಿನ್ನ ತೋಳ್ಬಂಧಿಯಲ್ಲಿ ನಿದ್ರಿಸುವ ಆಸೆ ನನಗೆ,,,,,,ಕೊನೆಯವರೆಗೆ,ಈ ನಯನಗಳು ಶಾಶ್ವತ ನಿದ್ರೆಗೆ ಜಾರುವವರೆಗೆ....
ಕಾಯುತ್ತಿರುವೆ ನಿನಗಾಗಿ ನಾನು...ಕಂದನ ಕಳೆದುಕೊಂಡ ಜನನಿಯಂತೆ......
ನಿನ್ನ ಉತ್ತರಕ್ಕಾಗಿ ಕಾಯುತ್ತಿರುವ....
ಇಂತಿ ನಿನ್ನ ಪ್ರೀತಿಯ
ಅಶು!!!!!

ನಾ ಸೋತು ಕುಳಿತಾಗ!!

ಯಾಕೋ ಏನೋ ಬರೆಯುವ ಮನಸಿಲ್ಲ!!
ಕೊನೆಯಿರದ ಕಥೆಯಿದು ಬರೆದೇನು ಪ್ರಯೋಜನಾ?
ಭಾವನೆಗಳಿಗೆ ಬೆಲೆ ಇರದ ಲೋಕದಲ್ಲಿ
ಭಾವಗಳ ಹೊತ್ತು ಕರೆತಂದರೆ,ಕೇಳುವವರಾರು
ಈ ಮೌನದ ನೋವಿನ ವ್ಯಥೆಯ!!!!
ಬಾಳು ಹಸನಾಗಿಸುವ ಕನಸಿನಲಿ
ಹಾಳು ವಿಧಿಯ ಕಪಟ ನಾಟಕ
ಆಡಿಸುವ ಗೊಂಬೆ ನಾನಾದಾಗ
ಮರೆತುಬಿಟ್ಟನೇ ಆಡಿಸುವಾತ ನನ್ನ!!?
ಕಾರಣ ಹುಡುಕುತ ಅಲೆಯುತಿರುವೆ ನಾನು
ಧೃತಿಗೆಟ್ಟ ಹುಚ್ಚಿಯಂತೆ!
ಬಾಡಿ ಬಳಲಿ ಹೋಗಿರುವೆ ನಾನು
ಮರುಭೂಮಿಯ ಹೂವಂತೆ!!!
ಮನದ ನೋವ ಹೇಳಲಾಗದೆ,
ಕೆರಳುವ ಕೋಪವ ಮರೆಸಲಾಗದೆ
ಸೋತು ಹೋಗಿರುವೆ ನಾನು!!
ಜೀವನ ಕಲಿಸುವ ಪಾಠಕ್ಕೆ ಗುರುವೆ ಇಲ್ಲ
ಬಹು ಅನುಭವಗಳ ಪಯಣವಿದು,
ಏನೆಂದು ಬರೆಯಲಿ,ನನ್ನ ಕಥೆಯಾ!!
ಈ ನೋವಿನ ವ್ಯಥೆಯಾ!!
ಇಂತಿ ನಿನ್ನ ಪ್ರೀತಿಯ
ಅಶು!!!!!!!!!

ನೆನಪುಗಳ ಕಚಕುಳಿಯ ಸೊಬಗು!!

ನಿನ್ನ ನೋಡುವ ತವಕ ಮನದೊಳಗೆ
ಕಾಣ ಹೇಳುತಿದೆ ಹೃದಯ ಮೆಲ್ಲಗೆ!
ಕಾರಣ ಹೇಳದೆ ಹೊರಟ ಇನಿಯನ
ಕರೆದು ಮಾತಾಡಿಸು ಎಂದು!!!
ಮುಸ್ಸಂಜೆ ಕಳೆವಾಗ ನಿನ್ನ ಸ್ಪರ್ಶದ ಅನುಭವ
ನೀ ನಿಂತಂತೆ ಹತ್ತಿರ ಮುರಿದು ನನ್ನ ಮೌನವ!!!
ಬಾರದೆ ಇರಲಾರೆ ಎಂಬ ನಂಬಿಕೆಯಲಿ
ಮಧುರ ನೆನಪುಗಳ ಆಸರೆಯಲಿ!
ನಿನ್ನ ಸಿಹಿ ಮುತ್ತಿನ ಉಸಿರಿನಲಿ!!
ನೀ ಬಳುವಳಿಯಾಗಿ ನೀಡಿದ ನೆನಪುಗಳಲಿ!!
ಕಂಡು ಕಾಣದ ನೋವಿನ ಕಚಕುಳಿಯು
ಹುಡುಕಿದರೂ ಸಿಗದ ನೆಮ್ಮದಿಯು!
ಕಾರಣ,ಮರೆತ್ತಿದ್ದೆ ನನ್ನ ನಾನು
ನಿನ್ನ ಪ್ರೀತಿಸುವ ಅವಸರದಲಿ,
ಅಮ್ಮನ ಜೋಗುಳಕೆ ನಿದ್ರೆ ಹೋದ ಕಂದನಂತೆ!!
ನಿನ್ನ ನೋಡುವಾಸೆ ಈ ಕಂಗಳಿಗೆ
ತಬ್ಬಿ ಮುದ್ದಾಡುವಾಸೆ ಈ ಕೈಗಳಿಗೆ
ಮುಂಜಾವಿನ ಕನಸಿನಲಿ,ನೀ ನನ್ನ ಅಪ್ಪಿದಂತೆ!
ಹಣೆ ಮೇಲೆ ಮುತ್ತಿಟ್ಟು ನೀ ಮುಗುಳ್ನಕ್ಕಂತೆ!!
ನಿಜವಾಗಬಹುದೇನೋ ಎಂಬ ಆಸೆ ಈ ಕನಸುಗಳಿಗೆ!!
ಮತ್ತದೇ ನೋವು,ಅದೇ ನೆನಪುಗಳು ಈ ಹೃದಯಕ್ಕೆ!!
ಸಾಂತ್ವನ ಹೇಳುವ ಬಲವಿಲ್ಲ,ಈ ಆತ್ಮಕ್ಕೆ!!
ಬದುಕಿರುವೆ ನಿನಗಾಗಿ ನಾನು
ನಿನ್ನ ನೆನಪುಗಳ ಮೆಲುಕು ಹಾಕುತ್ತ
ಮನದ ನೋವ ಮರೆಸುತ್ತ,!!
ಹಣೆ ಬರೆದ ಬ್ರಹ್ಮನ ಶಪಿಸುತ್ತ!!
ಕಾಯುತ್ತಿರುವೆ ನಾನು ಅದೇ ಹಳೆ ಭರವಸೆಯಲಿ!
ನಡೆಯುತ್ತಿರುವೆ ನಾನು ನೀ ಹೇಳಿಕೊಟ್ಟ ಪ್ರೀತಿಯ ದಾರಿಯಲಿ!!!
ಕಾದಿರುವೆ ನಿನಗಾಗಿ
ಧರೆಯ ಸೇರಲು ಕಾಯುತಿರುವ ಮಳೆಯಂತೆ!!
ಗಾನಕ್ಕಾಗಿ ಕಾದಿರುವ ಯಕ್ಷಿಯಂತೆ!!!
ಇಂತಿ ನಿನ್ನ ಪ್ರೀತಿಯ
ಅಶು!!!!!!!

this is for u Padmini

ಕಂಡಿಲ್ಲ ನಿನ್ನ ನಾನು ಬಹುದಿನ
ಕಂಡಿರುವುದು ಎರಡು ದಿನ!
ಅಂದು ಒಡನಾಟ ಮಿತವಾಗಿದ್ದರೂ
ನೀ ನನಗೆ ಇಷ್ಟವಾಗಿದ್ದೆ ಗೆಳತಿ!
ಕಂಡೆರಡು ದಿನಗಳು ಮಾನವನ
ಗುಣ ಅಳೆಯಲಾಗದ ರೀತಿ!!
ದಿನ ಕಳೆದಂತೆ ನೀ ಹತ್ತಿರವಾಗಿದ್ದೆ
ಕಂಡು ನಾನು ನಿನ್ನ ನೀತಿ!
ಮಗ್ಧತೆಯ ಮಾತಿನಲ್ಲಿ
ಮರುಳಾಗಿಸಿದೆ ನೀನು !
ಭೋರ್ಗರೆವ ಕಡಲ
ಮತ್ಸ್ಯರಾಜ ಬಿಗಿದಪ್ಪಿದಂತೆ!
ಸುಮ ತನ್ನ ದುಂಬಿಗಾಗಿ
ಸಿಹಿ ತುಂಬಿ ಕಾದಂತೆ!!
ನಿನ್ನ ಆ ಮೆತ್ತನೆಯ ಮಾತು
ಮುಗ್ಧತೆಯ ಅರಸಿಬಂದಂತೆ!!!!
ನಗು ನಗುತ್ತಿರು ನೀನು ಎಂದೆಂದೂ
ಮುಳ್ಳಿನ ನಡುವಲ್ಲು ತನ್ನ
ಸೊಬಗ ಬೀರುವ ಗುಲಾಬಿ ಹೂವಂತೆ!
ಚಿರವಾಗಲಿ ಈ ಸ್ನೇಹ
ಕಾಣದ ಕಡಲಿನ ದಡದಂತೆ!!!
ಇಂತಿ ನಿನ್ನ ಪ್ರೀತಿಯ
ಅಶು!!!!

ಮರಳಿ ಮರುಳಾದ ಕ್ಷಣ!!

ಮರೆತು ನಿಂತ ಕ್ಷಣ,
ಹಿಂದಿರುಗಿ ನೋಡಬೇಕೆನಿಸಿತು ಆ ದಿನ!
ಆಗಾಗಲೇ ಕ್ರಮಿಸಿತ್ತು ಬಹುದೂರ ಜೀವನ
ಮರೆತರೂ ನೆನಪಿಸಿಕೊಂಡಿತು ಮನ!
ಕ್ರಮಿಸಿದ ದೂರಕೆ ಅಳತೆ ಇಲ್ಲ!
ಅನುಭವಿಸಿದ ನೋವಿಗೆ ಕೊನೆಯಿಲ್ಲ
ಆ ವಿಧಿಯ ಆಟವ ಬಲ್ಲವರಿಲ್ಲ
ಅವನಾಟಕ್ಕೆ ಸಿಕ್ಕ ಗೊಂಬೆಗಳು ನಾವೆಲ್ಲ!
ಕಣ್ಣಮುಚ್ಚಾಲೆಯ ಆಟದಲ್ಲಿ,
ಸೋತೆನೋ ಗೆದ್ದೆನೋ ಎಂಬ ಗೊಂದಲದಲಿ!
ಕಾರಣ ತಿಳಿಯಲು ಹಂಬಲಿಸಿದೆ ಈ ಮನ!!
ಸೋತೆನಾದರೂ ಏಕೆ? ಗೆದ್ದೆನಾದರೂ ಇನ್ಯಾಕೆ?
ಜೀವನದ ಸೆಣಸಾಟದಲ್ಲಿ ಮರೆತುಬಿಟ್ಟೆನೇ ನನ್ನ ನಾನು?
ತಿಳಿದಿಲ್ಲ,ತಿಳಿಯುವ ಬಯಕೆಯೂ ಉಳಿದಿಲ್ಲ!
ಮತ್ತೆ ಚಿಗುರಿತು ಮನದ ಬಯಕೆ
ಕಿವುಚಿ ಕೊಲ್ಲದೆ ವಿಧಿಯಿಲ್ಲ ಈ ಮನಕೆ!
ಸುಖದಲ್ಲೂ ಕಷ್ಟ ಬಯಸುವ ಹುಚ್ಚಿ ನಾನೇನಾ
ಕಷ್ಟ ನೀಡಿದ ಸುಖವಿರಬಹುದು ಕಾರಣ!
ಮತ್ತೆ ಮರಳಿ ಜ್ಞಾಪಿಸಿಕೊಂಡ ಕ್ಷಣ
ಮನ್ನಡೆಯಲು ಸಂಕಲ್ಪ ಮಾಡಿದ ದಿನ
ಕ್ರಮಿಸಿದ ದೂರವ ತಿರುಗಿ ನೋಡದೆ
ಮುಂದಿಟ್ಟೆ ನಾ ಹೆಜ್ಜೆ ಒಂದೊಂದೆ!!
ತಿಳಿದಿಲ್ಲ ನಾಳೆ ಏನೆಂದು
ನಿಲ್ಲದಿರಲಿ ನನ್ನ ಪಯಣ ಇನ್ನೆಂದು!ಮುಂದೆಂದೂ!!
ಭಯವು ನನಗಿಲ್ಲ,ಮುಂದೆ ಸಾಗಲು
ಇರುವವು ನೆನಪುಗಳ ಅನುಭವಗಳು ಸಾಲು ಸಾಲು!
ಬರಬಹುದು ನನಗಾಗಿ ಒಂದು ದಿನ
ಬೀಗಿ ಹೆಳಲು ನನ್ನ ಬದುಕಿನ ಸವಿಕ್ಷಣದ ಕಥನ
ಸ್ಪೂರ್ತಿಯಾದ ಬಾಳ ನೌಕೆಯ ಬಿರುಸಿನ ಪಯಣ!
ಇಂತೀ ನಿನ್ನ ಪ್ರೀತಿಯ
ಅಶು!!!!!!!!!!!!

ಕಾಣದ ಮನಸ್ಸು!!

ಬಹಳ ದಿನಗಳ ಬಳಿಕ ಬರಯಲು ನಾ ಕುಳಿತೆ
ಮನದ ಮೌನವ ಸಂತೈಸುವ ತವಕದಲಿ!
ಮನದಾಳದ ಮೌನಿಯ ಪುಟವ ತೆರೆದಿಡಲು!!
ವ್ಯತ್ಯಾಸವಿಲ್ಲದ ಕವಿತೆಗಳು
ಅದೇ ಹಳೆ ನೋವುಗಳು!!
ವಿಶೇಷವಿಲ್ಲದ ದಿನಗಳವು
ಕಂಡುಕಾಣದ ಪಯಣಗಳು!!
ಸಾಗುತಿರುವ ಭರದಲ್ಲಿ ಮರೆತು ನೆನಪಿಸಿಕೊಂಡ ಕ್ಷಣ
ಕಣ್ಣೀರಿಟ್ಟೆ ನಾ,ಹಿಂದಿರುಗಿ ನೋಡಿದಾಗ ಆ ದಿನ!!
ನೆನಪುಗಳ ಸರಮಾಲೆ ಮಗದೊಮ್ಮೆ ಕೂಗಿದಾಗ
ಬಳಸಿ ನನ್ನ ಬಿಗಿದಪ್ಪಿದಾಗ!!
ಕಲ್ಲು ಮನಸ್ಸು ಮತ್ತೆ ಹೂವಾಗಿ ಅರಳಿ
ಮತ್ತದೇ ಲೋಕಕ್ಕೆ ಆಮಂತ್ರಣಕ್ಕೊಪ್ಪಿ
ಬರಮಾಡಿಕೊಂಡಂತೆ ಧರಣಿ!!!
ಮರೆತುಬಿಟ್ಟೆ ನಾ ವಾಸ್ತವದ ಅರಿವಿಕೆಯನು
ಮರುಳಾಗಿ ಸ್ವಪ್ನಲೋಕದ ಸವಿ ನೆನಪಪುಗಳಿಗಾಗಿ!!
ಬರೆಯಲು ಕುಳಿತ ಕೈಗಳು,ತಟಸ್ಥವಾಗಿ
ಕಾಯುತಿಹುದು ಮನಸಿಗಾಗಿ,
ಆರಂಭಿಸಿ ಬಿಟ್ಟುಹೋದ
ಕವಿತೆಯ ಪೂರ್ಣಗಳಿಸಲು,
ಮಧುವ ಹೀರಿ ಹಾರಿ ಹೋದ ದುಂಬಿಗಾಗಿ
ಕಾಯುತಿರುವ ಸುಮದಂತೆ!!!!!
ಇಂತಿ ನಿನ್ನ ಪ್ರೀತಿಯ
ಅಶು!!!!!!!